ಬಾದಾಮಿ ಪಟ್ಟಣದ ಮಲಪ್ರಭಾ ಎದಡಂಡೆ ಕಾಲುವೆ ಇಂಜಿನಿಯರಿಂಗ್ ಕಚೇರಿ ಕಟ್ಟಡ. 
ಜಿಲ್ಲೆ

ಸರ್ಕಾರಿ ಕಟ್ಟಡಗಳ ಪಹಣೆಯಲ್ಲೂ ವಕ್ಫ್ ಹೆಸರು !

ಬಾಗಲಕೋಟೆ: ರೈತರ ಜಮೀನು, ಖಾಸಗಿ ಸಂಸ್ಥೆಗಳ ಆಸ್ತಿ ಹಾಗೂ ಸರ್ಕಾರಿ ಕಟ್ಟಡಗಳು ಸೇರಿದಂತೆ ವಿವಿಧ ಆಸ್ತಿಗಳು ವಕ್ಫ್ ಗೆ ಸೇರಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿರುವುದು ಹಾಗೂ ಪಹಣೆಗಳಲ್ಲಿ ವಕ್ಫ್ ಹೆಸರು ಕೂಡಿಸಿರುವುದು ದಿನೇ ದಿನೇ ಬೆಳಕಿಗೆ ಬರುತ್ತಲೇ ಇವೆ.

ಇದೀಗ ಜಿಲ್ಲೆಯ ಬಾದಾಮಿ ಪಟ್ಟಣದಲ್ಲೂ ಸಹ ಸರ್ಕಾರಿ ಕಟ್ಟಡಗಳ ಪಹಣೆಯಲ್ಲಿ ವಕ್ ಹೆಸರು ಕೂಡಿಸಿದ್ದರೆ ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದಲ್ಲಿ ೫೪.೦೨ ಎಕರೆ ವಿಸ್ತೀರ್ಣದಲ್ಲಿ ಇರುವ ಆಸರೆ ಮನೆಗಳು, ಮೊರಾರ್ಜಿ ವಸತಿ ಶಾಲೆ, ಹಾಸ್ಟೇಲ್, ಅಂಗನವಾಡಿ ಕೇಂದ್ರಗಳು, ನೀರಿನ ಟ್ಯಾಂಕ್ ಸೇರಿ ವಿವಿಧ ಆಸ್ತಿಗಳು ವಕ್ ಗೆ ಸೇರಿದ್ದು, ಅವುಗಳನ್ನು ತೆರವುಗೊಳಿಸಿಕೊಡಿ ಎಂದು ಅಲ್ಲಿನ ಇಸ್ಲಾಮಿಯಾ ತಂಜೀಮ್ ಕಮೀಟಿ ಅಧ್ಯಕ್ಷರು ಜಿಲ್ಲಾಽಕಾರಿಗಳ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಶಿರೂರ ಗ್ರಾಮದ ಆಸ್ತಿಗಳ ಪಹಣೆಯಲ್ಲಿ ಇನ್ನೂ ವಕ್ ಹೆಸರು ಕೂಡಿಸಿಲ್ಲ. ಬಾದಾಮಿಯ ಸರ್ಕಾರಿ ಕಟ್ಟಡಗಳ ಪಹಣೆಯಲ್ಲಿ ವಕ್ ಹೆಸರು ಕೂಡಿಸಲಾಗಿದೆ.

ತಾಲೂಕು ಕೇಂದ್ರವಾಗಿರುವ ಬಾದಾಮಿ ಪಟ್ಟಣದಲ್ಲಿ ಸರ್ವೆ ನಂಬರ್ ೧೯೨ರಲ್ಲಿ ಬರುವ ಮಲಪ್ರಭಾ ಎಡದಂಡೆ ಕಾಲುವೆ ಇಂಜಿನಿಯರಿಂಗ್ ಕಚೇರಿ ಹಾಗೂ ನಿರ್ಮಾಣ ಹಂತದಲ್ಲಿ ಇರುವ ಮಿನಿ ವಿಧಾನಸೌಧ ಕಟ್ಟಡದ ಪಹಣೆಯಲ್ಲಿ ವಕ್ಫ್ ಹೆಸರು ಅದಾಗಲೇ ಕೂಡಿಸಲಾಗಿದೆ. ಈ ಬಗ್ಗೆ ಬಾದಾಮಿಯಲ್ಲಿ ಹಿಂದುಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬ ರೈತರು ಹಾಗೂ ಕಮರ್ಷಿಯಲ್ ನಿವೇಶನ ಉಳ್ಳವರು ತಮ್ಮ ತಮ್ಮ ಆಸ್ತಿಯ ಪಹಣೆಗಳನ್ನು ಚೆಕ್ ಮಾಡಿಸಿ ಎಂದು ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ.

ಇತ್ತ ಶಿರೂರ ಗ್ರಾಮದ ಪ್ರಕರಣದಲ್ಲಿ ವಕ್ಫ್ಆಸ್ತಿ ಎಂದು ಈಗಾಗಲೇ ಧಾರವಾಡ ಹೈಕೋರ್ಟ್ ಮೆಟ್ಟಿಲು ಹತ್ತಿದ್ದು, ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸೂಕ್ತವಾದ ಆದೇಶ ಮಾಡುವಂತೆ ನಿರ್ದೇಶಿಸಿದ್ದು, ಬಳಿಕ ಜಿಲ್ಲಾಽಕಾರಿಗಳು ಸಂಬಂಧಪಟ್ಟ ೬ ಎದುರುದಾರರು ಹಾಗೂ ಮುಖ್ಯ ಕಾರ್ಯನಿರ್ವಹಣಾಽಕಾರಿಗಳು ರಾಜ್ಯ ವಕ್ಫ್ ಮಂಡಳಿಯವರಿಗೆ ನೋಟಿಸ್ ಜಾರಿ ಮಾಡಿ ಎರಡು ಕಡೆಯ ವಕೀಲರಿಂದ ವಾದ ಆಲಿಸಿ, ಮೂರು ಅಂಶಗಳಲ್ಲಿ ನಕರಾತ್ಮಕ ಎಂದು ಉತ್ತರಿಸಿದ್ದು, ಅಂಶ ೪ ರಲ್ಲಿ ಅರ್ಜಿ್ಗಳನ್ನು ತೀರಸ್ಕರಿಸಲಾಗಿದೆ ಎಂದು ೨೭.೦೭.೨೦೨೩ ಎಂದು ಆದೇಶಿಸಿದ್ದಾರೆ.