ಜಿಲ್ಲೆ

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಿಂದ ಅಲ್ಪಾವಧಿ ವಿವಿಧ ಉಚಿತ ಕೋರ್ಸ್ ಆರಂಭ

ಮೈಸೂರು: ನಗರದ ಕೆಆರ್‌ಎಸ್ ರಸ್ತೆ ಬೆಳಗೊಳ ಕೈಗಾರಿಕಾ ಪ್ರದೇಶದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಸಿಎಂಕೆಕೆವೈ ಹಾಗೂ ಸ್ವಾತಂತ್ರೃ ಅಮೃತ ಮಹೋತ್ಸವ ಮುನ್ನಡೆ ಯೋಜನೆ ಅಡಿಯಲ್ಲಿ ಅಲ್ಪಾವಧಿಗೆ ವಿವಿಧ ಉಚಿತ ಕೋರ್ಸ್ ಆರಂಭಿಸಲಾಗಿದೆ ಎಂದು ಕೇಂದ್ರದ ಪ್ರಾಂಶುಪಾಲ ಡಾ.ಕೃಷ್ಣಮೂರ್ತಿ ತಿಳಿಸಿದರು.
ಐಟಿಐ, ಡಿಪ್ಲೊಮಾ, ಬಿಇ, ಎಂ.ಟೆಕ್ ವಿದ್ಯಾರ್ಹತೆಯುಳ್ಳವರಿಗಾಗಿ ಸೆಂಟರ್ ಆಫ್ ಎಕ್ಸಲೆನ್ಸ್ ಕೋರ್ಸ್, ಎಸ್‌ಎಸ್‌ಎಲ್‌ಸಿಯವರಿಗೆ ಐಟಿಐ, ಡಿಪ್ಲೊಮಾ, ಬಿಇ ಮತ್ತು ಎಂ.ಟೆಕ್‌ನವರಿಗಾಗಿ ಸಿಎನ್‌ಸಿ, ಕ್ರಿಯೋ, ಕ್ಯಾಡ್ ಕ್ಯಾಮ್, ಕ್ಯಾಟಿಯಾ, ಸಾಲಿಡ್ ವರ್ಕ್ ಮೊದಲಾದ ಕೋರ್ಸ್‌ಗಳಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಲ್ಲದೇ ಎಂಟರ್‌ಪ್ರೈಸಸ್ ಸಂಪನ್ಮೂಲ ಯೋಜನೆ ಅಡಿಯಲ್ಲಿಯೂ ಎಸ್‌ಎಪಿ, ಹಣಕಾಸು, ಮಾರಾಟ ಮತ್ತು ವಿತರಣೆ, ಉತ್ಪಾದನೆ ಮತ್ತು ಯೋಜನೆ ಮೊದಲಾದ ರೀತಿಯ ಕೋರ್ಸ್‌ಗಳಿವೆ ಎಂದರು.
ಕೋರ್ಸ್‌ನ ಪ್ರಸ್ತುತತೆಯ ಸಿದ್ಧಾಂತ, ಅಭ್ಯಾಸ ಕ್ರಮಕ್ಕೆ ಅನುಗುಣವಾಗಿ ಬೋಧನೆಗೆ ಕ್ರಮ ವಹಿಸಲಾಗಿದೆ. ಆಸಕ್ತರು ಮಾಹಿತಿಗೆ ಕೇಂದ್ರ ಅಥವಾ ಮೊ.99454 42654 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ವಿವಿಧ ಘಟಕದ ಮುಖ್ಯಸ್ಥರಾದ ಓಬಯ್ಯ, ರಾಧಾಕೃಷ್ಣ, ವಿನಯ್ ಇದ್ದರು.