ಜಿಲ್ಲೆ

ಸರ್ಕಾರಿ ಆರೋಗ್ಯ ಸಮುದಾಯ ಭವನಕ್ಕೆ ಔಷಧ ವಿತರಣೆ

ಬನ್ನೂರು: ಪಟ್ಟಣದಲ್ಲಿ ಚೈಲ್ಡ್ ಹೆಲ್ತ್ ಇಂಡಿಯಾ ಫೌಂಡೇಷನ್ ವತಿಯಿಂದ ಮಂಗಳವಾರ ಸರ್ಕಾರಿ ಆರೋಗ್ಯ ಸಮುದಾಯ ಭವನಕ್ಕೆ ಉಚಿತವಾಗಿ ಔಷಧ ನೀಡಲಾಯಿತು.

ಆಡಳಿತ ವೈದ್ಯಾಧಿಕಾರಿ ಡಾ.ಮಾಲತೇಶ್ ಮಾತನಾಡಿ, ಚೈಲ್ಡ್ ಹೆಲ್ತ್ ಇಂಡಿಯಾ ಫೌಂಡೇಷನ್ ಸಾಮಾಜಿಕ, ಮಾನವೀಯ ಸಮಸ್ಯೆಗಳನ್ನು ಪರಿಹರಿಸುವಂತ ನಿಟ್ಟಿನಲ್ಲಿ ಕೆಲಸ ಮಾಡುತ್ತ ನಿರಂತರವಾಗಿ ತೊಡಗಿಸಿಕೊಂಡು ಸಮಾಜಸೇವಾ ಕಾರ್ಯವನ್ನು ಮಾಡುತ್ತಿದ್ದು, ಅದರಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊರತೆ ಇದ್ದಂತೆ ಔಷಧಗಳನ್ನು ನೀಡುವ ಮೂಲಕ ಸಹಾಯ ಮಾಡಿದೆ ಎಂದು ತಿಳಿಸಿದರು.

ಇವರ ಈ ಕಾರ್ಯದಿಂದ ಸಾರ್ವಜನಿಕರಿಗೆ ತುಂಬಾ ಉಪಯೋಗವಾಗಿದ್ದು, ಇಲ್ಲಿಗೆ ಬರುವಂತ ರೋಗಿಗಳಿಗೆ ಉಚಿತವಾಗಿ ಔಷಧ ನೀಡಲು ಸಹಾಯವಾಯಿತು ಎಂದು ತಿಳಿಸಿದರು.

ಕೃಷ್ಣಮೂರ್ತಿ ಮಾತನಾಡಿ, ಇದೊಂದು ಸೇವಾ ಮನೋಭಾವವುಳ್ಳಂತ ಫೌಂಡೇಷನ್ ಆಗಿದ್ದು, ಎಲ್ಲರ ಸಹಯೋಗದೊಂದಿಗೆ ಕೆಲಸ ನಿರ್ವಹಿಸುತ್ತಾ ಬರುತ್ತಿದೆ ಎಂದು ಹೇಳಿದರು.

ಕೃಷ್ಣಮೂರ್ತಿ, ರಾಜುಗೌಡ, ಡಾ.ಮಾಲತೇಶ್, ಡಾ,ರವಿಕುಮಾರ, ಡಾ.ಪುರುಷೋತ್ತಮ ಹಾಗೂ ಸಿಬ್ಬಂದಿ ಹಾಜರಿದ್ದರು.