ಜಿಲ್ಲೆ

ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದಿಂದ ಆಯುರ್ವೇದ ಜಾಗೃತಿ ಜಾಥಾ

ಮೈಸೂರು: ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ರಾಜೇಂದ್ರ ನಗರದ ಶ್ರೀಛಾಯಾದೇವಿ ಶಿಕ್ಷಣ ಮಹಾವಿದ್ಯಾಲಯದಿಂದ ಆಯುರ್ವೇದ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.

‘ಆಯುರ್ ನಡಿಗೆ ಮನೆ ಮನೆ ಕಡೆಗೆ’ ಘೋಷ ವಾಕ್ಯದೊಂದಿಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಜಾಥಾಕ್ಕೆ ಮಾಜಿ ಶಾಸಕ ಇ.ಮಾರುತಿ ರಾವ್ ಪವರ್ ಚಾಲನೆ ನೀಡಿದರು.

ಎನ್.ಆರ್.ಠಾಣೆ ಸಬ್ ಇನ್‌ಸ್ಪೆಕ್ಟರ್ ರಾಜು, ಸಮಾಜ ಸೇವಕ ದತ್ತಾತ್ರೇಯ ಶಿಂಧೆ, ಕಾರ್ಯಕ್ರಮದ ಆಯೋಜಕರಾದ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ್ ಶೆಣೈ, ಶ್ರೀಛಾಯಾದೇವಿ ಶಿಕ್ಷಣ ಮಹಾವಿದ್ಯಾಲಯ ಪಾಂಶುಪಾಲ ಡಾ.ಸಿ.ಆಂತೋನಿ ಪೌಲ್ ರಾಜ್, ಆಯುರ್ವೇದ ಚಿಕಿತ್ಸಾ ಕೇಂದ್ರದ ಆಡಳಿತಾಧಿಕಾರಿ ಎಂ.ಸಿ.ಶೋಭಾ, ಮುಖ್ಯಶಿಕ್ಷಕ ಮಂಜುನಾಥ ಇತರರು ಇದ್ದರು.

ಎನ್.ಆರ್.ಮೊಹಲ್ಲಾದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕೆಇಬಿ ಕಲ್ಯಾಣಮಂಟಪದ ಮೂಲಕ ಗಾಂಧಿನಗರ ವಿವಿಧ ಬಡಾವಣೆಗಳಲ್ಲಿ ಜಾಥಾ ನಡೆಯುತು. ಆಯುರ್ವೇದ ಕುರಿತು ಪ್ರಬಂಧ, ರಸಪ್ರಶ್ನೆ ಸೇರಿದಂತೆ ಇನ್ನಿತರ ಸ್ಪರ್ಧೆ ಆಯೋಜಿಸಲಾಗಿತ್ತು.