ತುಮಕೂರು: ಮುಂಜಾಗ್ರತಾ ಪರಿಕರಗಳಿಲ್ಲದೆ ಪೌರಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ಸುಪ್ರೀಂಕೋರ್ಟ್ 2014ರಲ್ಲಿಯೇ ಹೇಳಿದೆ. ಆದರೆ ವರ್ಷಕ್ಕೆ ನೂರಾರು ಕಾರ್ಮಿಕರು ಮಲಗುಂಡಿ ಸ್ವಚ್ಛಗೊಳಿಸುವ ವೇಳೆ ಮೃತಪಟ್ಟರೂ ಇದುವರೆಗೂ ಯಾವ ಅಧಿಕಾರಿಗೂ ಶಿಕ್ಷೆಯಾಗಿಲ್ಲ. ಈ ವಿಷಯದಲ್ಲಿ ಸರ್ಕಾರವೇ ಮೊದಲ ಅಪರಾಧಿ ಎಂದು ನಿವೃತ್ತ ನ್ಯಾ.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು. ನಗರದ ಬಾಲಭವನದಲ್ಲಿ ಮಂಗಳವಾರ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂ ಮುನ್ಸಿಪಲ್ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಲಾಂತರ ಪೌರನೌಕರರನ್ನು ಕಸ ಗುಡಿಸುವವರು, ಕಸ ಎತ್ತುವವರು, ಸಾಗಿಸುವವರು ಹೀಗೆ ಹಲವು ವಿಭಾಗಗಳಾಗಿ ವಿಂಗಡಿಸಿ, ಒಡೆದು ಆಳುವ ನೀತಿ ಅನುಸರಿಸುವ ಮೂಲಕ ನಮ್ಮ ಧ್ವನಿ ಹೆಚ್ಚಾಗದಂತೆ ಮಾಡಲಾಗುತ್ತಿದೆ ಎಂದರು. ನಿರುದ್ಯೋಗವೆಂದರೆ ಕೇವಲ ಕೆಲಸವಿಲ್ಲದೇ ಇರುವುದು ಎಂದರ್ಥವಲ್ಲ, ಇದರ ಹಿಂದೆ ಕಳವು, ಸುಲಿಗೆ, ದರೋಡೆ, ಭಯೋತ್ಪಾದನೆಯಂತಹ ಸಮಾಜ ವಿದ್ರೋಹಿ ಕೃತ್ಯಗಳು ಅಡಗಿರುವುದರಿಂದ ಸರ್ಕಾರಗಳು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮುಂದಾಗಬೇಕು. ಆಳುವ ಸರ್ಕಾರಗಳಿಗೆ ನಿರುದ್ಯೋಗ ಒಂದು ರಾಜಕೀಯ ವಿಷಯವಾಗಿದೆಯೇ ಹೊರತು ಇದರ ಹಿಂದಿನ ಸಮಾಜದ ಆರ್ಥಿಕ ಸಮಸ್ಯೆಗಳ ಪರಿಚಯವೇ ಇಲ್ಲ, ಎಲ್ಲವನ್ನೂ ಚುನಾವಣೆ ದೃಷ್ಟಿಕೋನದಿಂದ ನೋಡಲಾಗುತ್ತಿದೆ ಎಂದರು. ಇಂದು ಶಿಕ್ಷಣ ಪಡೆದವರಲ್ಲಿ ನಿರುದ್ಯೋಗಿಗಳು, ಅರೆ ಉದ್ಯೋಗಿಗಳು, ಉದ್ಯೋಗಕ್ಕೆ ಅರ್ಹರಲ್ಲದವರನ್ನು ಕಾಣಬಹುದು. ಪದವಿ ಪಡೆದ ಶೇ.80 ಯುವಜನರಿಗೆ ಉದ್ಯೋಗಕ್ಕೆ ಬೇಕಾದ ಕೌಶಲವೇ ಇಲ್ಲ, ದೇಶದಲ್ಲಿ 60.40 ಲಕ್ಷ ಹುದ್ದೆಗಳು ಖಾಲಿ ಇವೆ ಎಂದರು.
ಕರ್ನಾಟಕದಲ್ಲಿಯೇ ಸುಮಾರು 2.59 ಲಕ್ಷ ಮಂಜೂರಾದ ಹುದ್ದೆಗಳೇ ಖಾಲಿ ಇವೆ, ಇವುಗಳನ್ನು ತುಂಬುವಾಗ ರೋಸ್ಟರ್ ಪದ್ಧತಿ ಅನುಸರಿಸಬೇಕು. ಆಗ ತಳಸಮುದಾಯಗಳಿಗೆ ಉದ್ಯೋಗ ದೊರೆತು ಅವರು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರುತ್ತಾರೆ ಎಂಬ ಕಾರಣಕ್ಕೆ ಹುದ್ದೆಗಳನ್ನು ತುಂಬದೆ, ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ನಾಗಮೋಹನ್ ದಾಸ್, ನಿವೃತ್ತ ನ್ಯಾಯಾಧೀಶ ಪೌರಕಾರ್ಮಿಕರನ್ನು ನತೆಯಿಂದ ನಡೆಸಿಕೊಳ್ಳದಿರುವುದು ಈ ದೇಶದ ದುರಂತ. ಒಂದು ದಿನ ಅವರ ಕೆಲಸಕ್ಕೆ ಸಾಮೂಹಿಕ ರಜೆ ಹಾಕಿದರೆ, ದೇಶವೇ ಕೊಚ್ಚೆಗುಂಡಿಯಂತಾಗುತ್ತದೆ. ಹಾಗಾಗಿ, ಪೌರಕಾರ್ಮಿಕರ ವೇತನ ಕುರಿತಂತೆ ಒಂದು ರಾಷ್ಟ್ರೀಯ ನೀತಿಯ ಅಗತ್ಯವಿದೆ. ಕೆ.ದೊರೆರಾಜು, ನಿವೃತ್ತ ಡಿಡಿಪಿಯು ಸಮಾನ ಕೆಲಸಕ್ಕೆ ಸಮಾನ ವೇತನ ಕುರಿತಂತೆ ನಿರ್ದೇಶಕರ ಕಚೇರಿಯಲ್ಲಿ ಈಗಾಗಲೇ ಚರ್ಚೆ ಆಗಿದ್ದು, ಬೇಡಿಕೆ ಈಡೇರುವ ವಿಶ್ವಾಸವಿದೆ. ಪೌರಕಾರ್ಮಿಕರು ಮಕ್ಕಳನ್ನು ವಿದ್ಯಾವಂತರನ್ನಾಗಿಸಿ, ಉತ್ತಮ ಪ್ರಜೆಗಳಾಗಿ ರೂಪಿಸಿ. ರೇಣುಕಾ, ಮಹಾನಗರ ಪಾಲಿಕೆ ಆಯುಕ್ತೆ