ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಎದುರು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಎದುರು ಸೋಮವಾರ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಽಕಾರಿ ಅಶೋಕ ತೇಲಿ ಅವರಿಗೆ ಮನವಿ ಸಲ್ಲಿಸಿದರು.  
ಜಿಲ್ಲೆ

ಸರ್ಕಾರದಿಂದ ತಾರತಮ್ಯ ಮಾಡಬೇಡಿ

ಬಾಗಲಕೋಟೆ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಸರ್ಕಾರದ ಸೌಲಭ್ಯ ಸಮಾನವಾಗಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಎದುರು ಸೋಮವಾರ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಪೌರ ಕಾರ್ಮಿಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಪರ ಜಿಲ್ಲಾಽಕಾರಿ ಅಶೋಕ ತೇಲಿ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಉಳಿದ ಎಲ್ಲ ಸರ್ಕಾರ ನೌಕರರಿಗ್ಗಿಂತ ಪೌರ ಕಾರ್ಮಿಕರು ತೀವ್ರ ಸಮಸ್ಯೆಯಲ್ಲಿ ಬದುಕುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಿಸುತ್ತಿಲ್ಲ. ಪ್ರಥಮವಾಗಿ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರು ಅಂತ ಘೋಷಿಸಬೇಕು, ಕೆಜಿಐಡಿ, ಜಿಪಿಎ-À, ಜ್ಯೋತಿ ಸಂಜೀವಿನಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು, ಕಳೆದ ೩೦ ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೀರು ಸರಬರಾಜು ಸಿಬ್ಬಂದಿಗಳು, ಲೋರ‍್ಸ, ಕ್ಲೀರ‍್ಸ, ಪೌರ ಕಾರ್ಮಿಕರು, ಸೂಪರ ವೈಜರ್, ಕಂಪ್ಯೂಟರ ಆಪರೇಟರ, ಜ್ಯೂನಿಯರ ಪ್ರೋಗಾಮರಗಳಿಗೆ ನೇರವಾಗಿ ವೇತನ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಹಲವು ಸಾರಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೋರಾಟ ನಡೆಸಲಾಗಿದೆ. ಆದರೇ ಸರ್ಕಾರ ಭರವಸೆ ನೀಡುವದರಲ್ಲಿ ಕಾಲ ಹರಣ ಮಾಡುತ್ತಿದೆ. ಹೀಗಾಗಿ ಮೇ ೨೭ ರಿಂದ ಅನಿಽðಷ್ಟಾವಽ ಧರಣಿ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕನಕಗಿರಿ ಮಿರ್ಜಿ, ಡಿ.ಡಿ.ಹಗೆದಾಳ, ಶಿವಮೂರ್ತೆಪ್ಪ ಜುಮ್ಮನಕಟ್ಟಿ, ರವಿ ಹುಲಸಪ್ಪಗೋಳ, ಮಂಗಳೇಶ ಪೂಜಾರಿ, ಡಿ.ಕೆ.ಜಮಖಂಡಿ, ರಂಜಾನಾ ಬಾದಾಮಿ, ಮಾಹಲಿಂಗಪ್ಪ ಸುಮೇರ ಇತರರು ಇದ್ದರು.