ಜಿಲ್ಲೆ

ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಿರಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಮಹಿಳಾ ಕುಶಲಕರ್ವಿುಗಳು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದು ಸ್ವಂತ ಉದ್ಯಮ ಆರಂಭಿಸಬೇಕು ಎಂದು ಧಾರವಾಡ ಕರಕುಶಲ ಸೇವಾ ಕೇಂದ್ರದ ಸಹಾಯಕ ನಿರ್ದೇಶಕಿ ದರ್ಶನಾ ರಾಘವ ಹೇಳಿದರು.

ರ್ಯಾಪಿಡ್ ಸಂಸ್ಥೆಯ ಸಹಯೋಗದೊಂದಿಗೆ ಹುಬ್ಬಳ್ಳಿ-ಧಾರವಾಡ ಲಘು ಉದ್ಯೋಗ ಭಾರತಿ ಧಾರವಾಡದಲ್ಲಿ ಬುಧವಾರ ಆಯೋಜಿಸಿದ್ದ ಕುಶಲಕರ್ವಿು ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧಾರವಾಡ ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಶಿವರಾಜ ಅಳ್ಳಿಮಟ್ಟಿ ಮಾತನಾಡಿ, ಬ್ಯಾಂಕ್​ನಿಂದ ಕುಶಲಕರ್ವಿುಗಳ ಒಳಿತಿಗಾಗಿ ಇರುವ ಯೋಜನೆಗಳನ್ನು ವಿವರಿಸಿದರು. ಲಘು ಉದ್ಯೋಗ ಭಾರತಿ ಹು-ಧಾ ಅಧ್ಯಕ್ಷ ಎಸ್.ಸಿ. ಪಾಟೀಲ, ಇ-ಕಾಮರ್ಸ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕುಶಲಕರ್ವಿುಗಳಿಗೆ ಇರುವ ಅವಕಾಶಗಳನ್ನು ತಿಳಿಸಿ, ತಮ್ಮೊಂದಿಗೆ ಗ್ರಾಮ ಶಿಲ್ಪಿ ಪ್ರದರ್ಶನ ಏರ್ಪಡಿಸಲು ಮುಂದೆ ಬನ್ನಿ ಎಂದು ಕರೆ ನೀಡಿದರು.

ಲಘು ಉದ್ಯೋಗ ಭಾರತಿ ಕರ್ನಾಟಕ ಕಾರ್ಯದರ್ಶಿ ಹೇಮಾ ಬೆಂತೂರ, ಹು-ಧಾ ಕಾರ್ಯದರ್ಶಿ ಪ್ರಸಾದ ಪಾವಟೆ, ರ್ಯಾಪಿಡ್ ಸಂಸ್ಥೆ ಕಾರ್ಯದರ್ಶಿ ವನಶ್ರೀ ಪುರೋಹಿತ, ಇದ್ದರು. 46 ಕುಶಲಕರ್ವಿು ಕಾರ್ಡ್​ಗಳನ್ನು ವಿತರಿಸಲಾಯಿತು.