ಅರಕೇರಾ ಸಮೀಪದ ಆಲ್ಕೋಡ ಗ್ರಾಮದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ನೋಡಲ್ ಅಧಿಕಾರಿ ಗವಿಸಿದ್ದಪ್ಪ ಉದ್ಘಾಟಿಸಿದರು. ಪಿಡಿಒ ಸುರೇಶ, ಗ್ರಾ.ಪಂ ಸದಸ್ಯರಾದ ನಾಗರಾಜ, ಮಹೇಶ ನಾಯಕ, ಮಲ್ಲಯ್ಯ, ರಂಗಪ್ಪ ದೊರೆ, ವೆಂಕಟೇಶ ಗೌಡ ಇತರರಿದ್ದರು. 
ಜಿಲ್ಲೆ

ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

ಅರಕೇರಾ: ಗೃಹಲಕ್ಷ್ಮೀ ಯೋಜನೆ ಮಹಿಳೆಯರನ್ನು ಸಶಕ್ತರನ್ನಾಗಿ ಮಾಡುವ ಉದ್ದೇಶ ಹೊಂದಿದೆ ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಹನುಮಂತ ಶಾವಂತಗಲ್ ಹೇಳಿದರು.


ಆಲ್ಕೋಡ ಗ್ರಾಮದಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ಕುಟುಂಬದ ಯಜಮಾನಿಗೆ ನೀಡುವ ಎರಡು ಸಾವಿರ ರೂಪಾಯಿಯಿಂದ ಕುಟುಂಬದ ನಿರ್ವಹಣೆ ಸಾಧ್ಯವಾಗಲಿದೆ. ಗ್ರಾಮೀಣ ಭಾಗದ ಕೂಲಿ, ಕಾರ್ಮಿಕ, ಬಡ ವರ್ಗದ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಸರ್ಕಾರ ಮಾಡಿದೆ. ಸರ್ಕಾರ ನೀಡುವ ನೆರವನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.


ತಾಲೂಕ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ರಂಗಮ್ಮ ಅನನವಾರ, ಗ್ರಾಪಂ ಸದಸ್ಯರಾದ ಯಮುನಮ್ಮ ವೆಂಕಟೇಶ, ಹನುಮಂತಿ ಪರಶುರಾಮ, ಸಿದ್ದಮ್ಮ ಗುಂಡಪ್ಪ, ಬಸಮ್ಮ ಅಮರೇಶ, ಪ್ರಮುಖರಾದ ಅಶೋಕ, ಶರಣಬಸವ, ಸಾಬಯ್ಯ ಕಾವಲಿ ಇತರರಿದ್ದರು.