ಮುಂಡರಗಿ: ತಾಲೂಕಿನ ಬೂದಿಹಾಳ, ವಿರುಪಾಪೂರ, ಬೀಡನಾಳ ತಾಂಡಾ ಗ್ರಾಮದ 700 ಬಡ ಕುಟುಂಬಗಳಿಗೆ ಮಂಗಳವಾರ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಬಿಜೆಪಿ ಮುಖಂಡರಾದ ಎಸ್.ವಿ.ಪಾಟೀಲ, ಪ್ರಶಾಂತಗೌಡ ಗುಡದಪ್ಪನವರ ಹಾಗೂ ಬುಟ್ಟು ಹೊಸಮನಿ ಅವರ ಗೆಳೆಯರ ಬಳಗದ ವತಿಯಿಂದ ನೀಡಲಾಗುತ್ತಿರುವ ದಿನಸಿ ಸಾಮಗ್ರಿಗಳ ವಿತರಣೆಗೆ ಶಾಸಕ ರಾಮಣ್ಣ ಲಮಾಣಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಸ್ಪಂದಿಸಬೇಕು. ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡು ಕರೊನಾ ಹೊಡೆದೋಡಿಸಲು ಮುಂದಾಗಬೇಕು’ ಎಂದರು.
ಶ್ರೀ ಮುದುಕೇಶ್ವರ ಶಿವಾಚಾರ್ಯರು, ತಹಸೀಲ್ದಾರ್ ಡಾ.ವೆಂಕಟೇಶ ನಾಯಕ, ಸಿಪಿಐ ಸುಧೀರಕುಮಾರ ಬೆಂಕಿ, ಮುಖಂಡರಾದ ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ರವೀಂದ್ರ ಉಪ್ಪಿನಬೆಟಗೇರಿ, ಸೋಮು ಹಕ್ಕಂಡಿ, ಚಿದಾನಂದ ರಾಠೋಡ ಇತರರಿದ್ದರು.
EndFragment