filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42; 
ಜಿಲ್ಲೆ

ಸರ್ಕಾರಕ್ಕೆ ರೈತರ ಸಂಕಷ್ಟದ ಅರಿವಿಲ್ಲ

ಬೆಳಗಾವಿ: ಜಿಲ್ಲೆಯಲ್ಲಿ ಆಗಿರುವ ಬೆಳೆಹಾನಿ ವೀಕ್ಷಿಸಲು ಬಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಬಿರಿಯಾನಿ ತಿನ್ನಲು ಬೆಳಗಾವಿಗೆ ಬರುತ್ತಿದ್ದಾರೆ. ಸರ್ಕಾರಕ್ಕೆ ರೈತರ ಸಂಕಷ್ಟದ ಅರಿವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದರು.

ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ಶುಕ್ರವಾರ ಭೇಟಿ ನೀಡಿದ ಬಳಿಕ ಬೈಲಹೊಂಗಲ ತಾಲೂಕಿನ ನಾಗನೂರ ಹೊರವಲಯದಲ್ಲಿ ರೈತ ಜತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಅ.4ರಂದು ವಿವಿಧ ಕಾರ್ಯಕ್ರಮ ಉದ್ಘಾನೆಗೆ ಸಿಎಂ ಆಗಮಿಸುತ್ತಿರುವ ಕುರಿತು ಲೇವಡಿ ಮಾಡಿದರು.

ನಾವು ಎರಡು ತಿಂಗಳಿನಿಂದ ರಾಜ್ಯದಲ್ಲಿ ಮಳೆ ಹಾನಿ ಪರಿಶೀಲಿಸುತ್ತಿದ್ದು, ಪರಿಹಾರ ಕೊಡಿಸಲು ಸರ್ಕಾರದ ಕಿವಿಹಿಂಡುವ ಕೆಲಸ ಮಾಡುತ್ತೇವೆ. ಆದರೆ, ಪ್ರವಾಹದ ಬಗ್ಗೆ ಚಿಂತಿಸಬೇಕಾದ ಸಿದ್ದರಾಮಯ್ಯ, ಐದು ವರ್ಷದವರೆಗೆ ನಾನೇ ಸಿಎಂ ಎಂದು ಹೇಳುತ್ತ, ಅದೇ ಚರ್ಚೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಎರಡು ತಿಂಗಳಿನಿಂದ ಹಾನಿ ಸಂಭವಿಸುತ್ತಿದ್ದರೂ ಯಾರೂ ಬಂದಿಲ್ಲ. ಇವತ್ತು ನಾವು ಬಂದಿರುವುದಕ್ಕೆ ಮಾತ್ರ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಅತಿವೃಷ್ಟಿಯಾದ ಜಮೀನಿಗೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಸಮಸ್ಯೆ ಹೇಳಿಕೊಂಡ ರೈತರು, ಸೋಯಾಅವರೆ ಸಂಪೂರ್ಣ ಹಾನಿಯಾಗಿದೆ. ಎಕರೆಗೆ 12ರಿಂದ 15 ಕ್ವಿಂಟಾಲ್ ಇಳುವರಿ ಬರುವಲ್ಲಿ ಈ ಸಲ 2-3 ಕ್ವಿಂಟಾಲ್ ಮಾತ್ರ ಬರುತ್ತಿದೆ. ಯಾವೊಬ್ಬ ಅಧಿಕಾರಿ, ಶಾಸಕರೂ ನಮ್ಮ ಕಷ್ಟ ಕೇಳಿಲ್ಲ ಎಂದು ಅಳಲು ತೋಡಿಕೊಂಡರು. ಬೈಲಹೊಂಗಲ, ಬೆಳಗಾವಿ ಹಾಗೂ ಚಿಕ್ಕೋಡಿ, ಅಥಣಿ ತಾಲೂಕಿನ ಜಮೀನುಗಳಿಗೆ ಭೇಟಿ ನೀಡಿದ ಬಿಜೆಪಿ ಮುಖಂಡರು ಬೆಳೆಹಾನಿ ವೀಕ್ಷಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಜಿಲ್ಲೆಯ ಮಳೆಹಾನಿಯ ಮಾಹಿತಿ ನೀಡಿದರು. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಪರಿಷತ್ ಸಚೇತಕ ಎನ್. ರವಿಕುಮಾರ, ಸಂಸದ ರಮೇಶ ಜಿಗಜಿಣಗಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ರಮೇಶ ಜಾರಕಿಹೊಳಿ, ಶಶಿಕಲಾ, ಜೊಲ್ಲೆ, ವಿಠ್ಠಲ ಹಲಗೇಕರ, ಅಭಯ ಪಾಟೀಲ, ಸಿದ್ದು ಸವದಿ, ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಡಾ. ವಿ.ಐ. ಪಾಟೀಲ, ಸಂಜಯ ಪಾಟೀಲ, ಮಹಾಂತೇಶ ದೊಡಗೌಡರ, ಜಗದೀಶ ಮೆಟಗುಡ್ಡ ಇತರರಿದ್ದರು.