ಮಸ್ಕಿ: ಗ್ರಾಮ ಪಂಚಾಯಿತಿ ಸಿಬ್ಬಂದಿಯ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಪಂ ಇಒ ಅಮರೇಶಗೆ ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಸಂಘದ ಪದಾಧಿಕಾರಿಗಳು ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಬೆಳ್ಳಿಗನೂರು ಮಾತನಾಡಿ ಸರ್ಕಾರ ವೇತನ ಸಮರ್ಪಕವಾಗಿ ಕೊಡದೆ ಸತಾಯಿಸುತ್ತಿದೆ. 15ನೇ ಹಣಕಾಸು ಯೋಜನೆಯಡಿ ವೇತನ ಪಡೆಯುವಂತೆ ಆದೇಶ ಹೊರಡಿಸಿದೆ. ಪಿಡಿಒಗಳು ಸರ್ಕಾರ ನಿಗದಿ ಪಡಿಸಿದ ವೇತನ ಜಾರಿ ಮಾಡದೆ ಬಾಕಿ ಉಳಿಸಿಕೊಂಡಿದ್ದಾರೆ. ಕೂಡಲೆ ವೇತನ ಕೊಡುವಂತೆ ಒತ್ತಾಯಿಸಿದರು. ನಿವೃತ್ತಿಯಾದ ಮತ್ತು ಮರಣ ಹೊಂದಿದ ಸಿಬ್ಬಂದಿಗೆ ಉಪಧನ ನೀಡಿಲ್ಲ. ಇದರಿಂದಾಗಿ ಮೃತ ಸಿಬ್ಬಂದಿ ಕುಟುಂಬದವರು ಜೀವನ ನಡೆಸುವುದು ಕಷ್ಟವಾಗಿದೆ ಎಂದರು. ಶರಣಮ್ಮ, ದೇವಮ್ಮ, ಪಾರ್ವತಮ್ಮ, ಯಮನಮ್ಮ, ಶಾಂತಮ್ಮ ಇತರರು ಇದ್ದರು.