ಯರಗಟ್ಟಿ: ಪಶ್ಚಿಮ ಟ್ಟದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ. ಸುಮಾರು ಮನೆಗಳು ಹಾಳಾಗಿದ್ದು, ಜಿಲ್ಲೆಗೆ ಬಹಳ ನಷ್ಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಬೃಹತ್ ಜಿಲ್ಲೆಯಾಗಿದ್ದು ಆಡಳಿತ ಹಿತದಷ್ಟಿಯಿಂದ ನೂತನ ಜಿಲ್ಲೆ ೂಷಣೆ ಮಾಡಬೇಕು. ಇದು ಅಭಿವದ್ಧಿಗೆ ಪೂರಕವಾಗಲಿದೆ. ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಮುಖಂಡ ವಿರೂಪಾ ಮಾಮನಿ, ಕೃಷ್ಣಮೂರ್ತಿ ತೊರಗಲ್, ಚೇತನ ಜಕಾತಿ, ಸದಾನಂದ ಪಾಟೀಲ, ರಾಜು ನಿಡವಣಿ, ಮುನವಳ್ಳಿ ಪುರಸಭೆ ಸದಸ್ಯರಾದ ಶ್ರೀಕಾಂತ ಮಲ್ಲಗೌಡ್ರ , ಸುಭಾಸ ಗದ್ದಿಗೌಡ್ರ ಇತರರು ಇದ್ದರು.