ಬಳ್ಳಾರಿ : ಡೆಂಗ್ಯು ರೋಗದ ಪರೀಕ್ಷೆಯನ್ನು ಖಾಸಗಿ ಆಸ್ಪತ್ರೆ, ಡಯಾಗ್ನೋಸ್ಟೀಕ್ ಸೆಂಟರ ಮತ್ತು ಪ್ರಯೋಗಾಲಯಗಳಲ್ಲಿ ಸರ್ಕಾರ ನಿಗದಿ ಪಡಿಸಿದ ದರದಲ್ಲಿಯೇ ಪರೀಕ್ಷೆ ಕೈಗೊಳ್ಳಬೇಕು ಎಂದು ಡಿಎಚ್‌ಒ ಡಾ.ವೈ.ರಮೇಶಬಾಬು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡೆಂಗ್ಯು ರೋಗದ ಪರೀಕ್ಷೆ ವೇಳೆ ರೋಗಿಗಳಿಂದ ಹೆಚ್ಚು ಹಣ ಪಡೆಯುತ್ತಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಡೆಂಗ್ಯು ಎಲಿಸಾ ಎನ್‌ಎಸ್1 ಟೆಸ್ಟ್‌ಗೆ 300 ರೂ., ಡೆಂಗ್ಯು ಎಲಿಸಾ ಐಜಿಎಮ್ ಟೆಸ್ಟ್‌ಗೆ 300 ರೂ., ಸ್ಕ್ರೀನಿಂಗ್ ಟೆಸ್ಟ್‌ನಲ್ಲಿ ರ‌್ಯಾಪಿಡ್ ಕಾರ್ಡ ಟೆಸ್ಟ್ ಗೆ 250 ರೂ. ದರ ನಿಗದಿಪಡಿಸಲಾಗಿದೆ.