ಜಿಲ್ಲೆ

ಸರ್ಕಾರ ತೆಗೆದುಕೊಂಡ ನಿರ್ಣಯ ಮಸೂದೆಯಾಗಲಿ

ಯಾದಗಿರಿ: ಖಾಸಗಿ ಮತ್ತು ಸಂಘ-ಸAಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ವಿಷಯದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಣಯದಿಂದ ಯಾವುದೇ ಕಾರಣಕ್ಕು ಹಿಂಪಡೆಯಬಾರದು, ಅದು ಯಥಾವತ್ತಾಗಿ ಜಾರಿಯಾಗಬೇಕೆಂದು ಆಗ್ರಹಿಸಿ ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ನೇತೃತ್ವದಲ್ಲಿ ಪೊರಕೆ ಹಿಡಿದು ಶುಕ್ರವಾರ ಬೃಹತ್ ಪ್ರತಿಭಟನೆ ಮಾಡಲಾಯಿತು.

ಗುರುವಾರದ ಅಧಿವೇಶನದಲ್ಲಿ ಕರ್ನಾಟಕದಲ್ಲಿರುವ ಖಾಸಗಿ ಕಂಪನಿಗಳಲ್ಲಿ ಸಿ ಮತ್ತು ಡಿ ಗ್ರೂಪ್ ಹುz್ದೆಗಳಲ್ಲಿ ಶೇಕಡ ೧೦೦ ಉದ್ಯೋಗದಲ್ಲಿ ಮೀಸಲಾತಿ ನೀಡಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಘೋಷಣೆ ಮಾಡಿದಂತೆ ನಿರ್ಣಯ ತೆಗೆದುಕೊಳ್ಳಬೇಕಿತ್ತು. ಆದರೆ ಕೆಲ ರಾಜಕಾರಣಿಗಳ ಮತ್ತು ಉದ್ಯಮಿಗಳ ಕುತಂತ್ರದಿAದ ಆ ಮಸೂದೆ ಮಂಡನೆಯಾಗಲಿಲ್ಲ. ಇದು ಸರಿಯಲ್ಲ. ಸಿಎಂ ಮತ್ತು ಡಿಸಿಎಂ ತೆಗೆದುಕೊಂಡ ನಿರ್ಣವೇ ಮಸೂದೆಯನ್ನಾಗಿ ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಹಾಗೊಂದು ವೇಳೆ ಈ ವಿಷಯದಲ್ಲಿ ನಿರ್ಲಕ್ಷÈವಹಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿ¯್ಲÁಧ್ಯಕ್ಷ ಸಿದ್ದುರಡ್ಡಿ, ಕಕ ಸಂಚಾಲಕ ಶರಣು ಇಟಗಿ, ಕೊಡೇಕಲ್ ಅಧ್ಯಕ್ಷ ರಮೇಶ ಬಿರಾದಾರ, ಶಹಾಪುರ ಅಧ್ಯಕ್ಷ ವೆಂಕಟೇಶ ಬೊನೇರ, ಸುರಪುರ ಅಧ್ಯP್ಷÀ ನಿಂಗಪ್ಪ ಬಿಜಸಪುರ, ಜಿ¯್ಲÁ ಕಾರ್ಯದರ್ಶಿ ಶಿವಕುಮಾರ ಯರಗೋಳ, ಕಾರ್ಯದರ್ಶಿ ರವಿ ದೇವರಮನಿ, ಶರಣು ನಾಯಕೊಡಿ, ಬಾಪುಗೌಡ ಇತರರಿದ್ದರು.