ಬಸವಕಲ್ಯಾಣ: ಲಿಂಗಾಯತ ಸಮಾಜದ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೆಳಗಾವಿ ಸುವರ್ಣಸೌಧದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದು ಖಂಡನಾರ್ಹವಾಗಿದೆ. ಸರ್ಕಾರ ಕ್ಷಮೆ ಯಾಚಿಸಬೇಕು. ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯಬೇಕು ಎಂದು ಪಂಚ ಸೈನ್ಯ ತಾಲೂಕು ಘಟಕದ ಒತ್ತಾಯಿಸಿದೆ.
ತಾಲೂಕು ಘಟಕದ ಪದಾಧಿಕಾರಿಗಳ ನಿಯೋಗದಿಂದ ಗುರುವಾರ ತಾಲೂಕು ಆಡಳಿತ ಸೌದಕ್ಕೆ ತೆರಳಿ ಬೇಡಿಕೆ ಕುರಿತು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರರಿಗೆ ಸಲ್ಲಿಸಲಾಯಿತು.
ಪ್ರಮುಖರು ಮಾತನಾಡಿ, ಕೂಡಲ ಸಂಗಮದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟದ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನೆ ನಿಯಂತ್ರಿಸುವ ದುರುದ್ದೇಶದಿಂದ ಲಾಠಿ ಚಾರ್ಚ್ ನೆಪದಲ್ಲಿ ಹಲ್ಲೆ ನಡೆಸಿರುವುದನ್ನು ಸಮಾಜ ತೀವ್ರವಾಗಿ ಖಂಡಿಸುತ್ತದೆ. ಘಟನೆಯ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಮುಖ್ಯಮಂತ್ರಿಸಮಾಜದ ಕ್ಷಮೆ ಕೇಳಬೇಕು. ತಪ್ಪಿಸ್ಥರನ್ನು ಸೇವೆಯಿಂದ ವಜಾಗೊಳಿಬೇಕು ಮತ್ತು ಹೋರಾಟಗಾರರ ಮೇಲೆ ಹಾಕಿರುವ ಕೇಸ್ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪಂಚ ಸೈನ್ಯ ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ಸುಗೂರೆ, ಪ್ರಮುಖರಾದ ಜಗನ್ನಾಥ ಕಾಳಗೆ, ಹಣಮಂತ ಬಿರಾದಾರ್ ಧನ್ನೂರ್ ಕೆ., ಶಿವಶಂಕರ ಬಚಣ್ಣೆ, ಸೋಮನಾಥ ಬಿರಾದಾರ, ಚಿಟಿಟ ಮರಪಲ್ಲೇ, ನಾಗೇಶ ಅತಲ್ಲಾಪುರ, ಗೋರಖ, ಭಗವಾನ ಪಾಟೀಲ್, ರೇವನಸಿದ್ದ ಬಚಣ್ಣೆ, ಚೇತನ್ ಬಚಣ್ಣೆ, ಸಂಗಮೇಶ್ ಬಚಣ್ಣೆ ಇತರರಿದ್ದರು.