ಜಿಲ್ಲೆ

ಸರ್ಕಾರ ಆನ್‌ಲೈನ್ ನಕಲು ತಡೆಯಿರಿ

ರಮೇಶ ಮೇಳಕುಂದಾ

ಕಲಬುರಗಿ: ಆನ್‌ಲೈನ್ ಮಾರುಕಟ್ಟೆಯಲ್ಲಿ ಅನುಕೂಲಗಳ ಜತೆಗೆ ನೂನ್ಯನತೆಗಳು ಇದ್ದು, ಕಾಸ್ಮೆಟಿಕ್, ಆಹಾರ ಪದಾರ್ಥ ಸೇರಿ ವಿವಿಧ ಉತ್ಪನ್ನ ಮಾರಾಟದಲ್ಲಿ ನಕಲು ಹೆಚ್ಚಿನ ಪ್ರಕರಣ ಕಂಡು ಬರುತ್ತಿದ್ದು, ಇದು ಡಿಜಿಟಲ್ ಮಾರ್ಕೆಟಿಂಗ್‌ನ ವಿಶ್ವಾಸಕ್ಕೆ ಧಕ್ಕೆ ತರುತ್ತಿದೆ. ಸರ್ಕಾರಕ್ಕೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶಶಿಕಾಂತ ಪಾಟೀಲ್ ಆಗ್ರಹಿಸಿದರು.
ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಎಂಎಸ್‌ಎಂಇ, ಜಿಲ್ಲಾ ಕೈಗಾರಿಕಾ ಕೇಂದ್ರ, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಡಿಜಿಟಲ್ ಮಾರ್ಕೆಟಿಂಗ್ ಸೆಮಿನಾರ್‌ನಲ್ಲಿ ಮಾತನಾಡಿ, ಡಿಜಿಟಿಲ್ ಮಾರ್ಕೆಟಿಂಗ್ ಮೂಲಕ ಸರಳವಾಗಿ ಗ್ರಾಹಕರನ್ನು ತಲುಪಬಹುದು. ಸುಲಭವಾಗಿ ಮಾಹಿತಿ ಪಡೆದು, ಖರೀದಿ ಮಾಡಬಹುದು. ವಿಶ್ವಾಸಾರ್ಹ ಮಾರುಕಟ್ಟೆಯಾಗಿದ್ದು, ಅದರಲ್ಲಿನ ನ್ಯೂನ್ಯತೆ ತಡೆಯಬೇಕು ಎಂದು ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕಿ ರುಪಾಲಿ ಮಾತನಾಡಿ, ಆನ್‌ಲೈನ್‌ನಲ್ಲಿ ಹೆಚ್ಚು ಮಹಿಳೆಯರೇ ಖರೀದಿ ಮಾಡುತ್ತಿದ್ದು, ಗಮನ ಹರಿಸಿ ವಹಿವಾಟು ಮಾಡಬೇಕು. ಸೂಕ್ತ ಮತ್ತು ಸರಳ ಮಾರುಕಟ್ಟೆ ಇದಾಗಿದೆ ಎಂದರು.
ಎAಎಸ್‌ಎAಇ ಸಹಾಯಕ ನಿರ್ದೇಶಕ ಬಿ.ಎಸ್.ಜವಳಿ ಮಾತನಾಡಿ, ನಾವೇ ಉತ್ಪಾದಿಸಿದ ಉತ್ಪನ್ನಗಳ ಮಾರಾಟಕ್ಕೆ ಮಾಲ್‌ಗೆ ಹೋಗುವ ಸ್ಥಿತಿ ಇತ್ತು. ಇದೀಗ ಡಿಜಿಟಲ್ ಮಾರುಕಟ್ಟೆ ಬಂದಿದ್ದು, ಮನೆಯಲ್ಲಿಯೇ ಕುಳಿತು ವಿಶ್ವದ ಯಾವುದೇ ದೇಶಕ್ಕೂ ಉತ್ಪನ್ನ ಮಾರಾಟ ಮಾಡಬಹುದು. ಎಂಎಸ್‌ಎAಇ ಸಂಸ್ಥೆಯಿAದಲೇ ಗುಣಮಟ್ಟ, ಬ್ರಾÈಂಡಿAಗ್, ಪ್ಯಾಕಿಂಗ್, ಕ್ಯೂಆರ್‌ಕೋಡ್ ಸೇರಿ ಎಲ್ಲ ವ್ಯವಸ್ಥೆಗಳನ್ನು ಉಚಿತವಾಗಿ ಮಾಡಿ ಕೊಡಲಾಗುವುದು. ಇದರ ಲಾಭ ಪಡೆಯಬೇಕು ಎಂದರು.
ಕೆಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿದರು. ಕಾಸಿಯಾ ಸದಸ್ಯ ಚನ್ನಬಸಯ್ಯ ನಂದಿಕೋಲ, ಆಕಾಶ ತೊನಸಳ್ಳಿ, ಸುಭಾ ಲಕ್ಷ್ಮೀ , ಮಂಜುನಾಥ ಜೇವರ್ಗಿ, ಅಭಿಜೀತ ಪಡಶೆಟ್ಟಿ, ಪ್ರಭಾಕರ ಪಂಚಾಳ, ನಮೃತಾ, ಬಸವರಾಜ ಇತರರಿದ್ದರು.