ಜಿಲ್ಲೆ

ಸರ್ಕಾರ ಆದೇಶ ಹಿಂಪಡೆಯಲಿ

ಚಿಕ್ಕೋಡಿ: ಮತಗಟ್ಟೆ ಮಟ್ಟದ ಅಧಿಕಾರಿಯಾಗಿ ಕೆಲಸ ಮಾಡುವಂತೆ ಹೊರಡಿಸಿದ ಆದೇಶ ಹಿಂಪಡೆಯುವಂತೆ ರಾಜ್ಯ ಗ್ರಾಪಂ ಕಾರ್ಯದರ್ಶಿಗಳು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಸಮಿತಿ ನೇತೃತ್ವದಲ್ಲಿ ತಾಪಂ ಇಒ ಕೆ.ಎನ್. ವಣ್ಣೂರಗೆ ಸೋಮವಾರ ಮನವಿ ಸಲ್ಲಿಸಿದರು.

ಕಾರ್ಯದರ್ಶಿಗಳು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ತಮ್ಮ ಜಾಬ್‌ಚಾರ್ಟ್ ಪ್ರಕಾರ ಈಗಾಗಲೇ ಸಾಕಷ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಮತಗಟ್ಟೆ ಮಟ್ಟದ ಅಧಿಕಾರಿ ಕೆಲಸ ಕೊಟ್ಟರೆ ತೀರಾ ತ್ರಾಸದಾಯಕವಾಗುತ್ತದೆ. ಈ ಹೊಸ ಆದೇಶ ಹಿಂಪಡೆಯಲು ಒತ್ತಾಯಿಸಿದರು.

ಸಹಾಯಕ ನಿರ್ದೇಶಕ ಎಸ್.ಎಸ್. ಮಠದ, ಶಿವಾನಂದ ಶಿರಗಾಂವೆ ಹಾಗೂ ಅಧ್ಯಕ್ಷ ರಾಜು ಚನ್ನವರ, ಗೌರವಾಧ್ಯಕ್ಷ ತಾತ್ಯಾಸಾಹೇಬ ಭಬಗೌಡಾ, ದುಂಡಪ್ಪ ಭಜನಾಯಕ, ಮೀನಾಕ್ಷಿ ಕಮತೆ, ರಾಜು ಟೂಪುಗೋಳ, ದ್ರೌಪದಿ ವಂಜೀರೆ, ಸಿಕಂದರ್ ಸಯ್ಯದ್, ಬಸವರಾಜ ಬೋರಗಲ್ಲ, ನಿಂಗಪ್ಪ ಮಾಗಿ, ಆಶಾ ಮೋಪಗಾರ, ಪ್ರಮೋದ ಮಲ್ಲವ್ವಗೋಳ, ಬಾಬು ಕಾಂಬಳೆ ಉಪಸ್ಥಿತರಿದ್ದರು.