ಜಿಲ್ಲೆ

ಸರ್ಕಾರ ಅನ್ಯಾಯ ಸರಿಪಡಿಸಲಿ

ಚಿಕ್ಕೋಡಿ: ಹೋರಾಟ ಮಾಡದೆ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಜಿಲ್ಲಾ ಪ್ರಧಾನ ಸಂಚಾಲಕ ಚಂದ್ರಶೇಖರ ಅರಭಾಂವಿ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬೆಳಗಾವಿ ಜಿಲ್ಲೆಯ ಎಲ್ಲ ಸರ್ಕಾರಿ ನೌಕರ ಸಂಘದ ಸಂಚಾಲಕರ ಸಭೆಯಲ್ಲಿ ಮಾತನಾಡಿ, ೨೦೨೨ರ ಜುಲೈ ೧ರಿಂದ ೨೦೨೪ರ ಜುಲೈ ೩೧ರ ಮಧ್ಯದಲ್ಲಿ ನಿವೃತ್ತ ರಾಜ್ಯ ಸರ್ಕಾರಿ ನೌಕರರಿಗೆ ೭ನೇ ವೇತನದಲ್ಲಿ ಆದ ಅನ್ಯಾಯ ಸರಿಪಡಿಸಿ ಪೂರ್ಣ ಪ್ರಮಾಣದ ಹಣಕಾಸು ಸೌಲಭ್ಯ ಪಡೆಯಲು ನಿರಂತರ ಹೋರಾಟ ಮಾಡುತ್ತೇವೆ. ಹೋರಾಟಕ್ಕೆ ಜಯ ಸಿಗದೆ ಹೋದಲ್ಲಿ ಅಕ್ಟೋಬರ್ ಬಳಿಕ ನ್ಯಾಯಾಲಯದ ಮೋರೆ ಹೋಗಲಿದ್ದೇವೆ ಎಂದರು.

ಬೆಳಗಾವಿ ಜಿಲ್ಲಾ ಪ್ರಧಾನ ಸಂಚಾಲಕ ಅರ್ಜುನ ಸೊಂಟಕ್ಕಿ ಮಾತನಾಡಿದರು.

೨೦೨೫ರಿಂದ ೨೦೩೦ರ ಅವಧಿಗೆ ಹಿರಿಯನಾಗರಿಕರ ಚುನಾವಣೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸರ್ಕಾರಿ ನೌಕರ ಸಂಘದ ಹಾಜರಿದ್ದರು.