ಬಸವಕಲ್ಯಾಣ: ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದು, ಅವರ ಮಾದರಿ ಕಾಮಗಾರಿಗಳೇ ನಮ್ಮ ವೃತ್ತಿ ಜೀವನಕ್ಕೆ ಸ್ಫೂರ್ತಿ ಎಂದು ತಾಪಂ ಸಹಾಯಕ ನಿರ್ದೇಶಕ ಸಂತೋಷ ಚವ್ಹಾಣ್ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಇಂಜಿನಿರ‍್ಸ್ ದಿನ ಹಾಗೂ ಅಂತಾರಾಷ್ಟಿಯ ಪ್ರಜಾಪಭುತ್ವ ದಿನಾಚರಣೆಯಲ್ಲಿ ಮಾತನಾಡಿ, ಸಮಾಜದಲ್ಲಿ ಒಳ್ಳೆ ಕೆಲಸ ಮಾಡಿದಾಗ ಮಾತ್ರ ನಮ್ಮನ್ನು ಗುರುತಿಸಿಕೊಳ್ಳಲು ಆಗುತ್ತದೆ. ದೇಶದ ಏಳಿಗೆಗಾಗಿ ದುಡಿದ ಮಹಾತ್ಮರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಅಭಿವೃದ್ಧಿ ಕಾರ್ಯ ಮಾಡಬೇಕಿದೆ ಎಂದರು.
ತಾಲೂಕು ಯೋಜನಾಧಿಕಾರಿ ರಾಜಶೇಖರ ನೆಲ್ಲಿ ಮಾತನಾಡಿ, ಒಂದೇ ಇಲಾಖೆಯಲ್ಲಿ ಕೆಲಸ ಮಾಡುವ ನಾವೇಲ್ಲರು ಒಂದೇ ಕುಟುಂಬದ ಸದಸ್ಯರಂತೆ ಇದ್ದಾಗ ಮಾತ್ರ ಜನರಿಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂದರು.
ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾಂತ್ರಿಕ ಸಹಾಯಕ ಶ್ರೀಕಾಂತ ಪಾಟೀಲ್, ಬಿಎಫ್ಟಿ ರಾಮ ಹಾಗೂ ಕಾಯಕ ಮಿತ್ರ ನಿರ್ಮಲ ಅವರನ್ನು ಸನ್ಮಾನಿಸಲಾಯಿತು.
ತಾಂತ್ರಿಕ ಸಂಯೋಜಕ ಶಿವರಾಜ ಪಾಟೀಲ್, ತಾಪಂ ಸಹಾಯಕ ಲೆಕ್ಕಾಧಿಕಾರಿ ಅಹ್ಮದ್, ವ್ಯವಸ್ಥಾಪಕ ರಾಜರೆಡ್ಡಿ ಪಾಟೀಲ್, ತಾಂತ್ರಿಕ ಸಹಾಯಕ ಮಾಣಿಕ ಸೋನಕೇರಾ, ಶ್ರೀಕಾಂತ ಪಾಟೀಲ್, ಜಲೀಲ್‌ಸಾಬ್, ಮಲ್ಲಿಕಾರ್ಜುನ ಜಾಧವ, ಮಿಥುನ ಪ್ರಭಾ, ಅವಿನಾಶ, ನವಾಜಖಾನ್, ಮುಕ್ತಾರ, ಜಾನ್ ಇತರರಿದ್ದರು. ಐಇಸಿ ಸಂಯೋಜಕ ವೀರಾರೆಡ್ಡಿ ವಂದಿಸಿದರು. ಟಿಎ ಶ್ರೀಕಾಂತ ಪಾಟೀಲ್ ನಿರೂಪಣೆ ಮಾಡಿದರು.