ಜಿಲ್ಲೆ

ಸರಿಯಾದ ಆಹಾರ ಕ್ರಮದಿಂದ ಮಧುಮೇಹ ನಿಯಂತ್ರಣ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಬಿಜೆಪಿ, ಹಶ್ಮಿ ಫೌಂಡೇಷನ್, ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ, ಪಾಲಿಕೆ ಸದಸ್ಯೆ ಚಂದ್ರಿಕಾ ಮೇಸ್ತ್ರಿ, ಜೀವಿನಿ ಆರೋಗ್ಯ ಪ್ರತಿಷ್ಠಾನ ವತಿಯಿಂದ ತೊರವಿಹಕ್ಕಲದ ಜಿಗಳೂರು ಕಲ್ಯಾಣ ಮಂಟಪದಲ್ಲಿ ಸೋಮವಾರ ಮಧುಮೇಹ ರಿವರ್ಸ್ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸರಿಯಾದ ಆಹಾರ ಕ್ರಮ, ವ್ಯಾಯಾಮ ಹಾಗೂ ಜೀವನಶೈಲಿಯಿಂದ ಮಧುಮೇಹವನ್ನು ಔಷಧ ಇಲ್ಲದೆ ನಿಯಂತ್ರಣದಲ್ಲಿಡಬಹುದು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಬಡವರಿಗಾಗಿ ಆಯುಷ್ಮಾನ್ ಭಾರತ ಯೋಜನೆಯಡಿ 5 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಸೌಲಭ್ಯ ಸಿಗುವಂತೆ ಮಾಡಿದ್ದಾರೆ. ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜೀವಿನಿ ಆರೋಗ್ಯ ಪ್ರತಿಷ್ಠಾನ ಚೇರ್ಮನ್ ಡಾ. ಸಿದ್ದಲಿಂಗೇಶ ಸಾಲಿಮಠ ಮಾತನಾಡಿ, ಭಾರತದಲ್ಲಿ ಎಂಟು ಕೋಟಿ ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ಭಾರತವನ್ನು ಡಯಾಬಿಟಿಸ್ ರಾಜಧಾನಿ ಎಂದು ಕರೆಯುತ್ತಾರೆ. ಸ್ವಸ್ಥ ಸಮಾಜದಿಂದ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ. ಆದ್ದರಿಂದ ಡಯಾಬಿಟಿಸ್ ಮುಕ್ತ ಭಾರತ ಕಟ್ಟಬೇಕಿದೆ. ಅದಕ್ಕಾಗಿ ಜೀವಿನಿ ಆರೋಗ್ಯ ಪ್ರತಿಷ್ಠಾನವು ಡಯಾಬಿಟಿಸ್ ಮುಕ್ತ ಭಾರತ ಅಭಿಯಾನ ಆರಂಭಿಸಿದೆ ಎಂದರು.

ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ರಂಗಾ ಬದ್ದಿ, ಮೋಹನ ಶೆಟ್ಟರ್, ಹಶ್ಮಿ ಫೌಂಡೇಷನ್​ನ ರಜಾಕ್ ನಾಯಕ, ನಾಸಿರ್ ಮಲಿಕ್ ಉಪಸ್ಥಿತರಿದ್ದರು.