ಬಾಗಲಕೋಟೆ: ಜಿಲ್ಲೆಯಲ್ಲಿ ದಾಖಲಾದ ದೌರ್ಜನ್ಯ ಪ್ರಕರಣಗಳಿಗೆ ನಿರ್ಲಕ್ಷ್ಯ ಸಲ್ಲದು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಽಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಸಂಜೆ ಜರುಗಿದ ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಇಂತಹ ಘಟನೆಗಳ ಮೇಲೆ ನಿಗಾವಹಿಸುವ ಕೆಲಸವಾಗಬೇಕು. ಜನ ಭಯದಿಂದ ಬದಕುವಂತಾಗಬಾರದು. ಸಾಮಾನ್ಯ ಜನ ನೆಮ್ಮದಿಯಿಂದ ಬದುಕುವಂತಹ ವಾತಾವರಣ ಸೃಷ್ಟಿಯಾಗಬೇಕಿದೆ. ಅದಕ್ಕಾಗಿ ಆಡಳಿತ ಚುರುಕಾಗಬೇಕು ಎಂದು ಅಽಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಜಾತಿ ಜಾತಿಗಳ ಮಧ್ಯೆ ಬಿರುಕು ತುಂಬುವವರ ಮೇಲೆ ನಿಗಾವಹಿಸಬೇಕು. ಭಯ ಹುಟ್ಟಿಸುವಂತ ಕೆಲಸ ಆಗಬಾರದು. ಇಂತಹ ಘಟನೆಗಳು ಆಗದಂತೆ ಚುರುಕಾಗಿ ಕಾರ್ಯನಿರ್ವಹಿಸಬೇಕು. ಬೇಜವಾಬ್ದಾರಿ, ನಿರ್ಲಕ್ಷ್ಯ ತೋರುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸೊಕನಾದಗಿ ಗ್ರಾಮದಲ್ಲಿ ೧೫ ದಿನಗಳ ಹಿಂದೆ ಸಾಮೂಹಿಕ ಹಲ್ಲೆ ಹಾಗೂ ದೌರ್ಜನ್ಯ ಘಟನೆ ನಡೆದಿದೆ. ಭಯದ ವಾತಾವರಣ ನಿರ್ಮಾಣವಾಗಿದೆ. ಅಽಕಾರಿಗಳು ಶಾಂತಿ ಸಭೆ ಏಕೆ ಮಾಡಲಿಲ್ಲ? ಸಂಬAಽಸಿದ ಅಽಕಾರಿಗಳು ಸಹ ಭೇಟಿ ನೀಡದೆ ಇರುವುದು ಕರ್ತವ್ಯದಲ್ಲಿ ನಿರ್ಲಕ್ಷ್ಯ ಎದ್ದು ತೋರುತ್ತದೆ. ಸರಿಯಾಗಿ ಕೆಲಸ ಮಾಡದಿದ್ದರೆ ಬೇರೆ ಜಿಲ್ಲೆಗೆ ಹೋಗುವಂತೆ ಅಽಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಕಳೆದ ೨೦೨೪-೨೫ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು ೫೩ ಪ್ರಕರಣಗಳು ದಾಖಲಾಗಿದ್ದು, ೧೫ ಪ್ರಕರಣಗಳು ಮಾತ್ರ ಬಾಕಿ ಉಳಿದಿರುತ್ತದೆ. ಅದೇ ರೀತಿ ಏಪ್ರಿಲ್‌ದಿಂದ ಮೇ ಮಾಹೆಯವರೆಗೆ ೨೫ ಪ್ರಕರಣಗಳು ದಾಖಲಾಗಿರುವ ಬಗ್ಗೆ ಅಽಕಾರಿಗಳು ಸಭೆ ಗಮನಕ್ಕೆ ತಂದರು. ಈ ಕುರಿತು ಸಚಿವರು ತಾಲೂಕಾವಾರು ಮಾಹಿತಿ ಕೇಳಿದಾಗ, ಅಽಕಾರಿಗಳು ಸರಿಯಾದ ಮಾಹಿತಿ ನೀಡದೆ ಇರುವುದರಿಂದ ಅಸಮಾಧಾನಗೊಂಡರು. ಪ್ರತಿಯೊಂದು ಪ್ರಕರಣ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. ದೌರ್ಜನ್ಯ ಪ್ರಕರಣಗಳ ಬಗ್ಗೆ ಆಗಾಗ್ಗೆ ಸಭೆ ನಡೆಸಲು ತಿಳಿಸಿದರು.
ಜಿಲ್ಲೆಯಲ್ಲಿ ಗುಂಡನಪಲ್ಲೆ, ಚೌಡಾಪುರ, ಬೇವೂರ, ಕೆರೂರ, ಮುಷ್ಠಿಗೇರಿ, ಹೆಗ್ಗೂರು ಸೇರಿ ವಿವಿಧೆಡೆ ದೌರ್ಜನ್ಯ ಪ್ರಕರಣಗಳು ನಡೆದಿವೆ. ಆದರೆ ಅಽಕಾರಿಗಳು ತುರ್ತಾಗಿ ಕ್ರಮ ಕೈಗೊಂಡಿಲ್ಲ. ಬೀಳಗಿ ತಾಲೂಕಿಗೆ ಬಾಬು ಜಗಜೀವನರಾಮ್ ಭವನ ಮಂಜೂರಾಗಿದ್ದರೂ ಇಲಾಖೆಯವರು ಸದರಿ ಅನುದಾನವನ್ನು ಬೇರೆ ಕಡೆಗೆ ವರ್ಗಾಯಿಸಿದ್ದರಿಂದ ಅಲ್ಲಿಯ ಕೆಲಸ ಕುಂಠಿತಗೊAಡಿದೆ. ಅನುದಾನ ಬೇರೆಡೆ ವರ್ಗಾಯಿಸಿದ ಉದ್ದೇಶ ತಿಳಿದುಕೊಂಡು ಮಾಹಿತಿ ನೀಡಬೇಕು. ಅಲ್ಲದೆ, ಸದರಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಬAಽಸಿದ ಅಽಕಾರಿಗಳಿಗೆ ಸೂಚಿಸಿದರು.
ಜಿಪಂ ಸಿಇಒ ಶಶಿಧರ ಕುರೇರ ಅವರು, ಕಳೆದ ಸಾಲಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕಲ್ಯಾಣಕ್ಕಾಗಿ ಕಾಯ್ದಿರಿಸಿದ ಶೇ.೨೫ ಅನುದಾನವನ್ನು ನಿಗದಿತ ಅವಽಯಲ್ಲಿ ಸಂಪೂರ್ಣ ಖರ್ಚು ಮಾಡಲಾಗಿದೆ. ವಿಶೇಷ ಘಟಕ ಯೋಜನೆಯಡಿ ಶೇ.೭೬ ರಷ್ಟು ಹಾಗೂ ಗಿರಿಜನ ಯೋಜನೆಯಡಿ ಶೇ.೧೦೦ ರಷ್ಟು ಪ್ರಗತಿ ಸಾಽಸಲಾಗಿದೆ. ಸದರಿ ಅನುದಾನವನ್ನು ಹೊಲಿಗೆ ಯಂತ್ರ, ಶಿಕ್ಷಣಕ್ಕಾಗಿ ಪುಸ್ತಕ ಖರೀದಿ, ಅಂತ್ಯ ಸಂಸ್ಕಾರಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಭೆ ಗಮನಕ್ಕೆ ತಂದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಜಿಲ್ಲಾಽಕಾರಿ ಜಾನಕಿ ಕೆ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥರೆಡ್ಡಿ, ಜಿ.ಪಂ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಉಪ ಅರಣ್ಯ ಸಂರಕ್ಷಣಾಽಕಾರಿ ರುಥ್ರೇನ್, ಉಪವಿಭಾಗಾಽಕಾರಿಗಳಾದ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸದಾಶಿವ ಬಡಿಗೇರ, ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.