ಕಡೂರು ತಾಲೂಕು ಸರಸ್ವತಿಪುರ ಗ್ರಾಮ ದೇವತೆ ಶ್ರೀ ಕೊಲ್ಲಾಪುರೇಶ್ವರಿ ದೇವಾಲಯದಲ್ಲಿ ಚಂಡಿಕಾ ಹೋಮ ನೆರವೇರಿಸಲಾಯಿತು.  
ಜಿಲ್ಲೆ

ಸರಸ್ವತಿಪುರ ಗ್ರಾಮದಲ್ಲಿ ಚಂಡಿಕಾ ಹೋಮ

ಕಡೂರು: ಸರಸ್ವತಿಪುರ ಗ್ರಾಮದೇವತೆ ಶ್ರೀ ಕೊಲ್ಲಾಪುರೇಶ್ವರಿ ದೇವಾಲಯದಲ್ಲಿ ಗುರುವಾರ ಚಂಡಿಕಾ ಹೋಮ ನೆರವೇರಿಸಲಾಯಿತು.

ಗ್ರಾಮದ ಕಲ್ಯಾಣಿಯಲ್ಲಿ ಧಾರ್ಮಿಕ ಪೂಜಾ ಕಾರ್ಯಗಳು ಜರುಗಿದವು. ಬಳಿಕ ದಾಸೋಹ, ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀದೇವಿಯನ್ನು ಹಾಗೂ ಆಂಜನೇಯಸ್ವಾಮಿಯ ಉತ್ಸವಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಪಂ ಅಧ್ಯಕ್ಷ ಪದ್ಮನಾಭ್, ಕೊಲ್ಲಾಪುರೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಭೈರಪ್ಪ, ಚಲನಚಿತ್ರ ನಿರ್ದೇಶಕ ಗುರುದತ್, ಗ್ರಾಮದ ಮುಖಂಡರಾದ ಲೋಕೇಶ್, ಸಂತೋಷ್, ಪುಟ್ಟರಾಜು, ಸುರೇಶ್, ಚಂದ್ರಪ್ಪ, ಕಾಳೇಗೌಡ್ರು, ಎಸ್.ಡಿ.ಗೋಪಾಲಾಚಾರ್, ಅನಿಲ್ ಇತರರಿದ್ದರು.