ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರ ಬ್ಯಾಂಕ್‌ನ ಗ್ರಾಹಕರ ದಿನಾಚರಣೆ ಆಚರಿಸಲಾಯಿತು. ಶ್ರೀಕಾಂತ್ ರಾವ್, ಪ್ರವೀಣ್, ಗಣೇಶ್ ಇದ್ದರು.  
ಜಿಲ್ಲೆ

ಸರಸ್ವತಿ ಸಹಕಾರ ಬ್ಯಾಂಕ್‌ನಲ್ಲಿ ಗ್ರಾಹಕರ ದಿನಾಚರಣೆ

ವಿರಾಜಪೇಟೆ: ಪಟ್ಟಣದ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ ನಿಯಮಿತದಲ್ಲಿ ವಿರಾಜಪೇಟೆ ಶಾಖೆ 10ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ದಿನವನ್ನು ಆಚರಿಸಲಾಯಿತು. ಬೆಳಗ್ಗೆ ಗಣಪತಿ ಹೋಮ ಹಾಗೂ ಲಕ್ಷ್ಮೀ ಪೂಜೆಯನ್ನು ನೆರವೇರಿಸಲಾಯಿತು. ನಂತರ ಗ್ರಾಹಕರಿಗೆ ಸಿಹಿಯನ್ನು ಹಂಚಿ ಬ್ಯಾಂಕ್‌ನ ಹೊಸ ಹೊಸ ಯೋಜನೆಗಳು ಹಾಗೂ ಠೇವಣಿ ವಿಧಾನಗಳು, ಚಿನ್ನಾಭರಣ ಸಾಲ, ವಿಮಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಸರಸ್ವತಿ ಸಹಕಾರ ಸೊಸೈಟಿಯ ನಿರ್ದೇಶಕ ಶ್ರೀಕಾಂತ್‌ರಾವ್, ಶಾಖಾ ವ್ಯವಸ್ಥಾಪಕ ಡಿ.ಕೆ.ಪ್ರವೀಣ್, ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.