ಚಿಕ್ಕಮಗಳೂರು: ಗೃಹ ಸಚಿವರಾಗಿ ಮೂರನೇ ಬಾರಿಗೆ ಹುದ್ದೆ ನಿಭಾಯಿಸುತ್ತಿರುವ ಡಾ. ಜಿ. ಪರಮೇಶ್ವರ್ ಅವರ ಜನ್ಮ ದಿನದ ಅಂಗವಾಗಿ ಶಾಸಕ ಎಚ್.ಡಿ.ತಮ್ಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ನಗರದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಸಹಿ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ಮುಂದಿನ ದಿನಗಳಲ್ಲಿ ಸಚಿವರಿಗೆ ಆಯಸ್ಸು, ಆರೋಗ್ಯ, ಹೆಚ್ಚಿನ ಅಧಿಕಾರ ಸಿಗಲಿ ಎಂದು ಕ್ಷೇತ್ರದ ಜನರು ಮತ್ತು ಕಾರ್ಯಕರ್ತರ ಪರವಾಗಿ ಹಾರೈಸಿದರು.
ಡಾ. ಜಿ. ಪರಮೇಶ್ವರ್ ಅವರು ಕೇವಲ ದಲಿತ ಸಮುದಾಯಕ್ಕೆ ಸೀಮಿತರಾಗದೇ ಕೆಪಿಸಿಸಿ ಅಧ್ಯಕ್ಷರಾಗಿ ೬ ವರ್ಷಗಳ ಕಾಲ ಸೇವೆ ಸಲ್ಲಿಸಿದ ಪರಿಣಾಮ ೨೦೧೩ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದರು ಎಂದರು.
ಮುಖ್ಯಮAತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರೊಂದಿಗೆ ಪರಮೇಶ್ವರ್ ಅವರು ೨೦೨೩ ರಲ್ಲಿ ಶ್ರಮಿಸಿದ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಮಾತನಾಡಿ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವ ಸರಳ, ಸೌಮ್ಯ ರಾಜಕಾರಣಿ ಡಾ. ಜಿ. ಪರಮೇಶ್ವರ್‌ರವರಿಗೆ ಆಯಸ್ಸು, ಆರೋಗ್ಯದ ಜೊತೆಗೆ ರಾಜಕೀಯದಲ್ಲಿ ಉನ್ನತ ಹುದ್ದೆ ಅಲಂಕರಿಸಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ ಮಂಜೇಗೌಡ, ಕಾಂಗ್ರೆಸ್ ಮುಖಂಡರಾದ ಮಲ್ಲೇಶ್‌ಸ್ವಾಮಿ, ಓಂಕಾರಣ್ಣ, ವೇಣುಗೋಪಾಲ್, ನೇತ್ರಾವತಿ, ಮಹೇಶ್, ಚಂದ್ರು, ಶಾಂತಕುಮಾರ್, ರಾಜ್ ಕುಮಾರ್, ಜಗದೀಶ್, ವೆಂಕಟೇಶ್, ಸುದೀಪ್ ಮತ್ತಿತರರಿದ್ದರು.