ಜಿಲ್ಲೆ

ಸರಳ ದಸರಾ ಆಚರಣೆಗೆ ನಿರ್ಧಾರ

ದೋರನಹಳ್ಳಿ : ಮಳೆ ಇಲ್ಲದೆ ಎಲ್ಲಡೆ ಬರಗಾಲ ಆವರಿಸಿದ್ದರಿಂದ ಈ ಬಾರಿಯ ದಸರಾ ಉತ್ಸವ ಪದ್ಧತಿಯಂತೆ ಸರಳ ಆಚರಣೆಗೆ ನಿರ್ಧರಿಸಲಾಗಿದೆ ಎಂದು ಶ್ರೀ ಶಾಂಭವಿಮಾತಾ ಚಿಕ್ಕಮಠದ ಪೀಠಾಧಿಪತಿ ಶ್ರೀ ಶಿವಲಿಂಗರಾಜೇAದ್ರ ಶಿವಾಚಾರ್ಯ ತಿಳಿಸಿದರು.

ಶ್ರೀ ಶಾಂಭವಿಮಾತಾ ಚಿಕ್ಕಮಠದಲ್ಲಿ ದಸರಾ ಆಚರಣೆ ನಿಮಿತ್ತ ಶುಕ್ರವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಠದ ಪರಂಪರೆಯAತೆ ದಸರಾ ಮಹೋತ್ಸವ ಆಚರಿಸಲು ನಿರ್ಣಯಿಸಿದ್ದು, ಈ ಬಾರಿ ಬರಗಾಲ ನಿಮಿತ್ತ ಭಕ್ತರಿಗೆ ಹೆಚ್ಚಿನ ಹೊರೆಯಾಗದಂತೆ ಸರಳವಾಗಿ ಆಚರಣೆ ತೀರ್ಮಾನಿಸಲಾಗಿದ್ದು, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪುರಾಣ ಜತೆಗೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕರ‍್ಯಕ್ರಮ ಆಯೋಜಿಸಿ ಅವರನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.

ವೀರಸಂಗಣ್ಣ ದೇಸಾಯಿ, ಜೆಟ್ಟೆಪ್ಪ ಹಿರೇಪೂಜಾರಿ, ಯಮನಪ್ಪ ಪೂಜಾರಿ, ನಿಂಗಣ್ಣ ಮುರದೊಡ್ಡಿ, ಜೆಟ್ಟೆಪ್ಪ ಬಿರಾಳ, ರಾಜಕುಮಾರ ಆಂದೇಲಿ, ಗಣಪತರಾವ ಜೋಳದ, ಗದಿಗೆಪ್ಪ ಅಗಸಿ, ಪ್ರಭುರಾಯ ಮಲಗೊಂಡ, ಈಶ್ವರಪ್ಪ ಲಕ್ಕಶೆಟ್ಟಿ, ಕಲ್ಲಪ್ಪ ಖಾನಾಪುರ, ಸಂಗಣ್ಣ ಮಲಗೊಂಡ, ಯಮನಪ್ಪ ಹುಡೇದ, ಗೊಲ್ಲಾಳಪ್ಪ ಗೋಲಗೇರಿ, ದೊಡಪ್ಪ ದೇಸಾಯಿ, ಅಬ್ದುಲ್‌ಸಾಬ್ ಶಹಾಪುರ, ಅಬ್ದುಲ್, ವೆಂಕಟೇಶ ಕಶೆಟ್ಟಿ, ಖಂಡಪ್ಪ ಗುಂಟನೂರ, ಮಾನಪ್ಪ ಹುಲಸೂರ, ಮಹ್ಮದ್, ಹಯ್ಯಾಳಪ್ಪ ಗುಂಟನೂರ, ಯಲ್ಲಪ್ಪ ಹುಡೇದ ಇತರರಿದ್ದರು.

ನಂತರ ಭಕ್ತರಿಂದ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಲಾಯಿತು.