ಬಾಗಲಕೋಟೆ: ಟಾಟಾ ಏಸ್, ಕಾರು ಹಾಗೂ ಬೈಕ್ ಗಳ ನಡುವೆ ಸರಣಿ ಅಪಘಾತ ಸಂಭವಿಸಿ ಸ್ಥಳದಲ್ಲಿ ಮೂವರು ದುರ್ಮರಣ ಹೊಂದಿರುವ ದಾರುಣ ಘಟನೆ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಹತ್ತಿರ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಜಮಖಂಡಿಯಿ0ದ ವಿಜಯಪುರಕ್ಕೆ ಹೊರಟಿದ್ದ ಟಾಟಾ ಏಸ್ ಹಾಗೂ ವಿಜಯಪುರದಿಂದ ಜಮಖಂಡಿ ಕಡೆಗೆ ಬರುತ್ತಿದ್ದ ಕಾರು ಪರಸ್ಪರ ಡಿಕ್ಕಿ ಹೊಡೆದಿವೆ. ಇದೇ ವೇಳೆ ಟಾಟಾ ಏಸ್ ಹಿಂದೆ ಬರುತ್ತಿದ್ದ ಎರಡೂ ಬೈಕ್ ಗಳಲ್ಲಿ ಒಂದು ಡಿಕ್ಕಿ ಹೊಡೆದರೆ ಮತ್ತೊಂದರ ಮೇಲೆ ಟಾಟಾ ಏಸ್ ವಾಹನ ಬಿದ್ದು, ಮೂವರು ವಾಹನದಲ್ಲಿ ಇದ್ದ ತಲಾ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಕಾರಿನಲ್ಲಿ ಇದ್ದ ಜಮಖಂಡಿ ತಾಲೂಕಿನ ಜಂಬಗಿ ಬಿಕೆ ಗ್ರಾಮದ ಆನಂದ ಬಾಡಗಿ(೨೬), ಟಾಟಾ ಏಸ್ ನಲ್ಲಿದ್ದ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಅರಬಾವಿ ನಿವಾಸಿ ಭೀಮಪ್ಪ ಗಂಟೆಣ್ಣವರ (೪೨) ಹಾಗೂ ಬೈಕ್ ನಲ್ಲಿದ್ದ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಮಹಾಂತೇಶ್ ಹೊನ್ನಾಕಟ್ಟಿ (೩೫) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಟಾಟಾ ಏಸ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದಾಗ ಟಾಟಾ ಏಸ್ ಹಿಂದೆ ಇದ್ದ ಎರಡು ಬೈಕ್ ಗಳ ಪೈಕಿ ಒಂದು ಬೈಕ್ ಡಿಕ್ಕಿ ಹೊಡೆದಿದೆ. ಈ ಬೈಕಿನಲ್ಲಿ ಇದ್ದವನಿಗೆ ಗಾಯವಾಗಿದೆ. ಆದರೆ, ಅಪಘಾತದ ರಬಸಕ್ಕೆ ಟಾಟಾ ಏಸ್ ಮತ್ತೊಂದು ಬೈಕ್ ನ ಮೇಲೆ ಅಪ್ಪಳಿಸಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮೃತ ಮೂವರು ವಾಹನ ಸವಾರರು ಆಗಿದ್ದಾರೆ.
ಅಪಘಾತದಿಂದಾಗಿ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಸರಣಿ ಅಪಘಾತದ ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವಷ್ಠಾಽಕಾರಿ ಅಮರನಾಥ ರೆಡ್ಡಿ, ಜಮಖಂಡಿ ಡಿವೈಎಸ್ಪಿ ಶಾಂತವೀರ ಈ ನೇತೃತ್ವದಲ್ಲಿ ಸ್ಥಳೀಯ ಪೊಲೀಸ್ ಅಽಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.