ಮೈಸೂರು: ಸರಗಳ್ಳನನ್ನು ಬಂಧಿಸಿರುವ ಕುವೆಂಪುನಗರ ಠಾಣೆಯ ಪೊಲೀಸರು, ಆತನಿಂದ 30 ಗ್ರಾಂ ತೂಕದ ಮಾಂಗಲ್ಯ ಸರವನ್ನು ಜಪ್ತಿ ಮಾಡಿಕೊಂಡಿದ್ದಾರೆ
ಶ್ರೀರಾಂಪುರ 2ನೇ ಹಂತದ ಎಲ್‌ಐಜಿ ಕಾಲನಿಯ ಸಂಕಲ್ಪ ಸಿದ್ಧಾರ್ಥ ಅಪಾರ್ಟ್‌ಮೆಂಟ್ ಹತ್ತಿರದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಪತ್ತೆ ಕಾರ್ಯದಲ್ಲಿ ಕೃಷ್ಣರಾಜ ಎಸಿಪಿ ರಮೇಶ್‌ಕುಮಾರ್ ಅವರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಎಲ್.ಅರುಣ್, ಪಿಎಸ್‌ಐ ಎಸ್.ಪಿ.ಗೋಪಾಲ್, ಸಿಬ್ಬಂದಿ ವಿ.ಆನಂದ್, ಕೆ.ಟಿ.ಮಂಜುನಾಥ್, ಮಹೇಶ್ವರ್, ಎಚ್.ವಿ.ಮಂಜು, ನಾಗೇಶ್, ಯಶ್ವಂತ್, ಹಜರತ್, ಸುರೇಶ್ ಭಾಗವಹಿಸಿದ್ದರು.