ಯಾದಗಿರಿ: ನಗರ ಸೇರಿ ಯಾದಗಿರಿ ಮತಕ್ಷೇತ್ರದ ಸವರ್ಾಂಗಿಣ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ತಿಳಿಸಿದರು.
ನಗರದ ವಾಡರ್್ 23ರಲ್ಲಿನ ವೀರಶೈವ ಕಲ್ಯಾಣ ಮಂಟಪದ ಪಕ್ಕ ನೂತನವಾಗಿ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿ, ಬೆಳೆಯುತ್ತಿರುವ ನಗರದಲ್ಲಿನ ಎಲ್ಲ 31 ವಾಡರ್್ಗಳ ಅಭಿವೃದ್ಧಿಗೊಳಿಸಲಾಗುವುದು. ಸಿಸಿ ರಸ್ತೆ, ಚರಂಡಿ, ವಿದ್ಯುತ್ ಸೇರಿ ಮೂಲಸೌಲಭ್ಯ ಕಲ್ಪಿಸಲಾಗುವುದು. ಕೆಲ ವಾಡರ್್ಗಳಲ್ಲಿ ಈಗಾಗಲೇ ಆರ್ಓ ಪ್ಲಾಂಟ್ಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಅನೇಕ ಕಡೆ ನೀರಿನ ಘಟಕದ ಕಿಟಕಿ ಗಾಜುಗಳನ್ನು ಒಡೆದು ಹಾಳು ಮಾಡಿದ್ದು ಗಮನಿಸಿದ್ದೇನೆ. ಸಾರ್ವಜನಿಕರು ಸರಕಾರದ ಆಸ್ತಿಯನ್ನು ತಮ್ಮ ಸ್ವಂತ ಆಸ್ತಿಯಂತೆ ಕಾಳಜಿ ವಹಿಸಬೇಕು. ಘಟಕದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅಕಾರಿಗಳು ಸಹ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.
ಪೌರಾಯಯಕ್ತ ಸಂಗಪ್ಪ ಉಪಾಸೆ, ಎಇಇ ರಜನಿಕಾಂತ್, ಪ್ರಮುಖರಾದ ಅವಿನಾಶ ಜಗನ್ನಾಥ, ವಿಶ್ವನಾಥ ಠಾಣಗುಂದಿ, ವಿಶ್ವನಾಥ ಮಾಲೀ ಪಾಟೀಲ್, ಶರಣಗೌಡ ಪಾಟೀಲ್, ಗಂಗಾಧರ ಜೀವಣಗಿ, ಅಶೋಕ ದೇವಿಶೆಟ್ಟಿ, ಅನಿಲ ಲೇವಡಿ, ರವಿ ಬುಕ್ಕಾ, ನಾಗೇಶ ಶೆಟ್ಟಿ ಇದ್ದರು.