ಜಿಲ್ಲೆ

ಸರಕಾರದಲ್ಲಿ ವರ್ಗಾವಣೆ ದಂಧೆ ನಡೆದಿಲ್ಲ


ಯಾದಗಿರಿ: ರಾಜ್ಯ ಸರಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪ ನಿರಾಧಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ಈ ಹಿಂದೆ ಬಿಜೆಪಿ, ಜೆಡಿಎಸ್ ಅಧಿಕಾರದಲ್ಲಿದ್ದಾಗ ವರ್ಗಾವಣೆ ದಂಧೆ ನಡೆಸಿದ್ದಾರೆ. ಬಹುಶಃ ನಾವು ಕೂಡಾ ಅದನ್ನೇ ಮಾಡುತ್ತವೆ ಎಂದು ಕನವರಿಸುತ್ತಿದ್ದಾರೆ. ವರ್ಗಾವಣೆ ಆಗಿಲ್ಲ ಅಂತ ಎಲ್ಲಿಯೂ ಹೇಳಿಲ್ಲ. ಹೊಸ ಸಕರ್ಾರ ಬಂದ ಮೇಲೆ ಕೆಲ ಅಧಿಕಾರಿಗಳ ವಗರ್ಾವಣೆ ಆಗಲೇಬೇಕಾಗುತ್ತದೆ. ಹಾಗಂತ ಹಣ ಪಡೆದುಕೊಂಡು ವರ್ಗ ಮಾಡಿದ್ದೀವಾ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಶಹಾಪುರದಲ್ಲಿನ ಗೋದಾಮಿನಲ್ಲಿ ಅಕ್ಕಿ ಕಳ್ಳತನ ಪ್ರಕರಣವನ್ನುಸರಕಾರ ತನಿಖೆಗೆ ಆದೇಶಿಸಿದೆ. ಎಲ್ಲೆಲ್ಲಿ ಸ್ಟಾಕ್ ಪಾಯಿಂಟ್ ಇವೆ, ಅಲ್ಲಿ ಸಂಪೂರ್ಣ ಪರಿಶೀಲನೆ ನಡೆಸಲಾಗುತ್ತಿದೆ. ಹಿಂದಿನ 5 ತಿಂಗಳವರೆಗೆ ಸರಿಯಾಗಿಯೇ ಇತ್ತು. ಆದರೆ ಇದೀಗ ವ್ಯತ್ಯಾಸ ಕಂಡು ಬಂದಿದೆ. ಆರೋಪಿಗಳ ಮೇಲೆ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಕಾನೂನಿನ ಪ್ರಕಾರ ತನಿಖೆ ನಡೆಸಲಾಗುವುದು. ಈ ವಿಷಯದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.