ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ದೇಶದಲ್ಲಿ ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಇಂಡಿಯಾ ಯಮಹಾ ಮೋಟರ್ ಪ್ರೖೆವೇಟ್ ಲಿಮಿಟೆಡ್ (ಐವೈಎಂ) ಹುಬ್ಬಳ್ಳಿಯಲ್ಲಿ ಭಾನುವಾರ ವೀಕೆಂಡ್ ಕಾರ್ಯಕ್ರಮವಾದ ದಿ ಕಾಲ್ ಆಫ್ ದಿ ಬ್ಲ್ಯೂ ಆಯೋಜಿಸಿತ್ತು. ಯಮಹಾದ ಸುಮಾರು 400 ಉತ್ಸಾಹಿ ಅಭಿಮಾನಿಗಳು ಮತ್ತು ಬೈಕ್ ರೈಡರ್ಗಳು ಪಾಲ್ಗೊಂಡಿದ್ದರು.
ಅಭಿಮಾನಿಗಳು ಮತ್ತು ಸವಾರರು ಬ್ರ್ಯಾಂಡ್ನ ಪ್ರೀಮಿಯಂ ದ್ವಿಚಕ್ರ ವಾಹನಗಳ ಅತ್ಯಾಧುನಿಕ ತಂತ್ರಜ್ಞಾನ, ಕಾರ್ಯಕ್ಷಮತೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ತಿಳಿದುಕೊಂಡರು. ಜಿಮ್ಾನಾ ರೈಡರ್ ಮತ್ತು ವುಡನ್ ಪ್ಲಾಂಕ್ ಚಾಲೆಂಜ್ ಸಂಸ್ಥೆಗಳ ಬೈಕ್ ರೈಡರ್ಗಳು ರೈಡಿಂಗ್ ಕೌಶಲಗಳನ್ನು ಪ್ರದರ್ಶಿಸಿದರು. ಬೈಕ್ ಚಾಲನೆ ವೇಳೆ ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಲಾಯಿತು.
ಇದೇ ವೇಳೆ ಯಮಹಾ ಕಂಪನಿಯ ಅತ್ಯಂತ ನೆಚ್ಚಿನ ಬೈಕ್ಗಳನ್ನು ಪ್ರದರ್ಶಿಸಲಾಯಿತು. ಸೂಪರ್ ಸ್ಪೋರ್ಟ್ಸ್ ಆರ್3 ಮತ್ತು ಹೈಪರ್ ನೆಕೆಡ್ ಎಂಟಿ- 03 ಬೈಕ್ಗಳನ್ನು ವೀಕ್ಷಿಸಿದ ರೈಡಿಂಗ್ ಉತ್ಸಾಹಿಗಳು ಸಮ್ಮೋಹನಗೊಂಡರು.
ಬೈಕರ್ಸ್ ಕೆಫೆಯಲ್ಲಿ ಬೈಕ್ ಪ್ರಿಯರು ವಿಶೇಷ ಬ್ರ್ಯಾಂಡ್ಗಳು, ರೈಡಿಂಗ್ಗೆ ಅಗತ್ಯವಾದ ಉಡುಪುಗಳನ್ನು ವೀಕ್ಷಿಸಿದರು. ಗೇಮಿಂಗ್ ಜೋನ್ನಲ್ಲಿ ಮೋಟೋಜಿಪಿ ರೈಡ್ ಮಾಡುವ ಮೂಲಕ ರೋಮಾಂಚಕಾರಿ ಅನುಭವವನ್ನು ಪಡೆದುಕೊಂಡರು.