ಜಿಲ್ಲೆ

ಸಮ್ಮೋಹನ ಜಾಲಕ್ಕೆ ಮನಸೋತ ಜನ

ಕಲಬುರಗಿ: ಅಂತಾರಾಷ್ಟ್ರೀಯ ಖ್ಯಾತಿಯ ಕುದ್ರೋಳಿ ಗಣೇಶ ಅವರ ಮೈಂಡ್​ ಮ್ಯಾಜಿಕ್​ ಮೆಂಟಲಿಸಂ ಜಾದೂ ಪ್ರಯೋಗಕ್ಕೆ ಜನಸ್ತೋಮ ಸಮ್ಮೋಹನಕ್ಕೆ ಒಳಗಾಗಿ, ವಿಸ್ಮಯ ಹುಟ್ಟಿಸಿತು.

ನಗರದ ಪಿಡಿಎ ಇಂಜಿನಿಯರಿಂಗ್​ ಕಾಲೇಜಿನ ಸ್ಯಾಕ್​ ಸಭಾಂಗಣದಲ್ಲಿ ಭಾನುವಾರ ಸಂಜೆ ರ‍್ಪಡಿಸಿದ್ದ ನಡೆದ ಮೈಂಡ್​ ಮ್ಯಾಜಿಕ್​ ಪ್ರರ‍್ಶನದಲ್ಲಿ ಕುದ್ರೋಳಿ ಗಣೇಶ ಅವರ ಕೈಚಳಕ ಮತ್ತು ಮೈಂಡ್​ ಮೇಲಿನ ಅಪರ‍್ವ ಪ್ರಯೋಗವೂ ಪ್ರೇಕ್ಷಕರನ್ನು ಆಶ್ರ‍್ಯ ಚಕಿತಗೊಳಿಸಿತು.

ಎರಡುವರೆ ಗಂಟೆ ನಡೆದ ವಿಜ್ಞಾನ ಮನಶಾಸ್ತ್ರದ ಸಮ್ಮಿಲನದ ವಿಶೇಷ ಮೈಂಡ್​ ಮ್ಯಾಜಿಕ್​ ಮನೋ ಭ್ರಮೆ ಮತ್ತು ಜಾದು ಚಮತ್ಕಾರಗಳ ಮನೋರಂಜನೆಯಿಂದ ಸಾಂಸತಿಕ ಲೋಕದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿತು.

ಪ್ರಾದೇಶಿಕ ಆಯುಕ್ತರು ಬರೆದ ಚೀಟಿಯಲ್ಲಿದ್ದ ಬಾಲ್ಯದ ಗೆಳೆಯನನ್ನು ಜಾದುಗಾರ ಮೈಂಡ್​ ರೀಡಿಂಗ್​ ಮೂಲಕ ಹೆಸರು ಪ್ರಕಟಿಸಿದಾಗ ಸಭಾಂಗಣದಲ್ಲಿ ಚಪ್ಪಾಳೆಗಳ ಸುರಿಮಳೆಯಾಯಿತು. ಪ್ರಾದೇಶಿಕ ಆಯುಕ್ತ, ಡಿಸಿ, ಜಿಪಂ ಸಿಇಒ ಅವರೇ ಸ್ವತ@ ಮ್ಯಾಜಿಕ್​ನಲ್ಲಿ ಪಾಲ್ಗೊಂಡು ಫುಲ್​ ಖುಷ್​ ಆದ ಅಪರ‍್ವ ಪ್ರಸಂಗ ನಡೆಯಿತು.

ಕಲಬುರಗಿ ಸಹಾಯಕ ರಿಜಿಸ್ಟರ್​ ಬಸವರಾಜ್​ ಚೇಂಗಟಿ ಚಾಲನೆ ನೀಡಿದರು. ಪಾಲಿಕೆ ಉಪ ಆಯುಕ್ತೆ ಪ್ರಮೀಳಾ ಎಂ ಕೆ, ಸಂಘಟಕರಾದ ದಕ್ಷಿಣ ಕನ್ನಡ ಸಂಘದ ಗೌರವಾಧ್ಯಕ್ಷರಾದ ಪ್ರಶಾಂತ ಶೆಟ್ಟಿ ಇನ್ನಾ, ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ, ಕರ‍್ಯನಿರತ ಪತ್ರರ‍್ತರ ಸಂದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಹೋಟೆಲ್​ ವಸತಿ ಮತ್ತು ಬೇಕರಿ ಸಂಘದ ಅಧ್ಯಕ್ಷರಾದ ನರಸಿಂಹ ಮೆಂಡನ್​, ನಾಲ್ಕು ಚಕ್ರ ಚಾರಿಟೇಬಲ್​ ಟ್ರಸ್ಟ್​ ನ ಮಾಲಾ ಕಣ್ಣಿ, ಶಿವರಾಜ ಕೋಟ್ಯಾನ್​, ಸತ್ಯನಾಥ ಶೆಟ್ಟಿ ಅರುಣಾಚಲ ಭಟ್​, ವಿದ್ಯಾಧರ ಭಟ್​ ಉದ್ಘಾಟನೆಯಲ್ಲಿದ್ದರು. ಪ್ರಾದೇಶಿಕ ಆಯುಕ್ತ ಕೃಷ್ಣಾ ಬಾಜಪೇಯಿ, ಜಿಲ್ಲಾಧಿಕಾರಿ ೌಜಿಯಾ ತರನ್ನುಮ್​, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್​ ಪನ್ವಾರ್​, ಸಿಇಓ ಭಂವರಲಾಲ್​ ಮೀನಾ, ಡಾ.ಸದಾನಂದ ಪರ‍್ಲಾ, ಪ್ರೊ.ಪ್ರಹ್ಲಾದ ಬರ‍್ಲಿ, ಸಿದ್ದಪ್ಪ ಭಗವತಿ, ಡಾ.ವೀಣಾ ಸಿದ್ದಾರೆಡ್ಡಿ, ಡಾ.ರಕ್ಷಾ ಶೆಟ್ಟಿ, ಮಹಾದೇವ ಗುತ್ತೇದಾರ ಇತರರಿದ್ದರು.

ವಿಸ್ಮಯಗಳ ಸೃಷ್ಟಿ: ಅಗೋಚರ ಟೆಲಿಪತಿ, ಮನಸ್ಸಿನಲ್ಲಿ ನೆನೆದ ಹಾಡು ಕೊಳಲಲ್ಲಿ ನುಡಿಸುವುದು, ಚೀಟಿ ಬರೆದ ಪೆಟ್ಟಿಗೆಯಲ್ಲಿ ಹಾಕಿದ ಹಾಡು ನುಡಿಸುವುದು, ಸತ್ತವರ ಹೆಸರಿನಲ್ಲಿ ಬರೆದು ಹಾಕಿದ ಚೀಟಿ ಪೆಟ್ಟಿಗೆಯೊಳಗೆ ಹಾಕಿದಾಗ ಕರ‍್ಚಿ ಸಮೇತ ವೇದಿಕೆಯಲ್ಲಿ ಗಾಳಿಯಲ್ಲಿ ತೇಲಾಡುವುದು, ನೆಂಟರಿಷ್ಟರ ಹೆಸರು ಬರೆದು ಚೀಟಿ ಹಾಕಿ ಯಾರು ಬರೆದರು ಮತ್ತು ಯಾರ ಹೆಸರನ್ನು ಬರೆದರು ಎಂಬುದನ್ನು ಹೇಳುವ ಅಪರ‍್ವ ಮೈಂಡ್​ ರೀಡಿಂಗ್​, ಚಲನಚಿತ್ರ ನಟರೊಬ್ಬರ ಹೆಸರಿನ ಚೀಟಿ ಬರುತ್ತಿದ್ದಂತೆ ವೇದಿಕೆಯಲ್ಲಿ ಅವರ ಭಾವಚಿತ್ರ ಪ್ರತ್ಯಕ್ಷ, ಗ್ಲಾಸಿನಲ್ಲಿರುವ ಉಂಗುರ ಮಾಯವಾಗಿ ಮ್ಯಾಜಿಕ್​ ದಂಡದಲ್ಲಿ ಪ್ರತ್ಯಕ್ಷ, ಡಿಸಿ ಎತ್ತಿದ ಕರ‍್ಡ್​, ಸಂಖ್ಯೆ ಹಾಗೂ ಆಕೃತಿ ಜಾದೂಗಾರ ಚಿತ್ರ ಬರೆದು ಪ್ರರ‍್ಶಿಸಿ ಮನಸ್ಸು ರ‍್ಥೈಸುವ ಬಗೆ ಪಂಚೇಂದ್ರಿಯಗಳನ್ನು ಮೀರಿದ ಆರನೇ ಇಂದ್ರಿಯದ ಅನುಭೂತಿ ವಿಸ್ಮಯದ ಪ್ರರ‍್ಶನಕ್ಕೆ ಇಡೀ ಸಭಾಂಗಣ ಫುಲ್​ ಖುಷ್​ ಆಯಿತು.