ಜಿಲ್ಲೆ

ಸಮ್ಮೇಳನಾಧ್ಯಕ್ಷರ ಮೆರವಣಿಗೆ

 ಮೈಸೂರು: ಕನ್ನಡ ಸಾಹಿತ್ಯ ಪರಿಷತ್ ಮೈಸೂರು ನಗರ ಘಟಕದ ವತಿಯಿಂದ ಆಯೋಜಿಸಿದ್ದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮೆರವಣಿಗೆ ನಡೆಯಿತು

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರ ಧ್ವಜಾರೋಹಣವನ್ನು ಶಾಸಕ ಎಸ್.ಎ.ರಾಮದಾಸ್, ನಾಡ ಧ್ವಜಾರೋಹಣವನ್ನು ಮೇಯರ್ ಶಿವಕುಮಾರ್ ನೆರವೇರಿಸಿದರು. ಬಳಿಕ ಜೆಎಸ್‌ಎಸ್ ಮಹಾವಿದ್ಯಾಪೀಠದ ಮುಂಭಾಗದಿಂದ ಜಾನಪದ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.


ಖಾಲಿ ಕುರ್ಚಿ ದರ್ಶನ:
ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮಕ್ಕೆ ಸಭಿಕರ ಕೊರತೆ ತೀವ್ರವಾಗಿ ಕಾಡಿತು. ಶತಮಾನೋತ್ಸವ ಭವನ ಕಾಲು ಭಾಗದಷ್ಟೂ ಭರ್ತಿಯಾಗಿರಲಿಲ್ಲ. ಬಹಳಷ್ಟು ಕುರ್ಚಿಗಳು ಖಾಲಿ ಹೊಡೆಯುತ್ತಿದ್ದವು. ಬಳಿಕ ನಡೆದ ಗೋಷ್ಠಿಗಳು, ಕವನ ವಾಚನ, ಕವಿಗೋಷ್ಠಿ, ಸಮಾರೋಪ ಕಾರ್ಯಕ್ರಮವೂ ಭಣಗುಟ್ಟುತ್ತಿತ್ತು.