ಜಿಲ್ಲೆ

ಸಮ್ಮೇಳನಗಳಲ್ಲಿ ರಾಜಕೀಯಕ್ಕಿಂತ ಭಾಷೆ ಚರ್ಚೆಯಾಗಲಿ

ಮುಳಬಾಗಿಲಿನಲ್ಲಿ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಸಿದ್ದತೆಗಳ ನಡೆದವು.


ಕನ್ನಡ ಸಾಹಿತ್ಯ ಸಮ್ಮೇಳನಗಳು ನಾಡಿನ ನುಡಿಹಬ್ಬವಾಗಬೇಕೇ ವಿನಾ ಎಡ&ಬಲಪಂಥಿಯ ವಿಚಾರಗಳ ಭೆೇದಭಾವದ ವೇದಿಕೆಯಾಗಬಾರದು. ಕಾಂಗ್ರೆಸ್​, ಜೆಡಿಎಸ್​, ಬಿಜೆಪಿ, ಸಿಪಿಎಂ ಮತ್ತಿತರರ ಪಕ್ಷಗಳು ಎಂಬ ಭಾವನೆ ಇಲ್ಲದೆ ಎಲ್ಲರೂ ಪಾಲ್ಗೊಂಡು ನಮ್ಮ ನಾಡುಕಟ್ಟುವ ಸಂಕಲ್ಪದೊಂದಿಗೆ ಕನ್ನಡ ಸಾಹಿತ್ಯ ಬೆಳೆಸುವ ಮೇಲ್ಪಂಕ್ತಿಯನ್ನು ಅನುಷ್ಠಾನಗೊಳಿಸಬೇಕು ಎಂದು ಸಮ್ಮೇಳನಾಧ್ಯಕ್ಷ ಡಾ.ಜೆ.ಬಾಲಕೃಷ್ಣ ಅವರು ವಿಜಯವಾಣಿ ತಾಲೂಕು ಪ್ರತಿನಿಧಿ ಎ.ಅಪ್ಪಾಜಿಗೌಡರಿಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮುಳಬಾಗಿಲು

ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಗ್ಗೆ ನಿಮ್ಮ ಅಭಿಪ್ರಾಯ?
ನನಗಿಂತಲೂ ಹಿರಿಯ ಸಾಹಿತಿಗಳು ಅನುಭವಿಗಳಿಗೆ ಅವಕಾಶ ನೀಡಿ ಎಂದು ಹೇಳಿದ್ದೆ. ಆದರೆ ನನ್ನ ಹುಟ್ಟೂರಿನಲ್ಲಿ ನಡೆಯುವ ಸಮ್ಮೇಳನಕ್ಕೆ ಆಯ್ಕೆ ಮಾಡಿರುವುದು ಸಂತೋಷ ತಂದಿದೆ.


ಕನ್ನಡ ಭಾಷೆ ಸಾಹಿತ್ಯ ಬೆಳವಣಿಗೆಗೆ ಸಂದೇಶ ಏನು?
ಕನ್ನಡ ಭಾಷೆ ಅನ್ನ ಕೊಡುವ ಭಾಷೆಯಾಗಲು ಈಗ ಸಾಧ್ಯವಿಲ್ಲ. ಆದರೆ ಚೀನಾ, ಜರ್ಮನ್​, ಜಪಾನ್​ ಬಳಿಕ ಹೊರದೇಶಗಳಲ್ಲಿ ಆ ಭಾಷೆಗಳಲ್ಲಿ ಶಿಕ್ಷಣ ಮತ್ತು ಓದುಬರಹ ಇರುವವರಿಗೆ ಉದ್ಯೋಗ ಸಿಗುತ್ತದೆ. ರಾಜ್ಯದಲ್ಲಿ ಕನ್ನಡ ಭಾಷೆ ಬಲ್ಲವನಿಗೆ ಉದ್ಯೋಗ ಸಿಗುವಂತಹ ವಾತಾವರಣ ಇಲ್ಲವಾಗಿರುವುದು ದುರ್ದೈವದ ಸಂಗತಿ. ಈ ಬಗ್ಗೆ ಸಮ್ಮೇಳನಗಳಲ್ಲಿ ಹೆಚ್ಚು ಚರ್ಚೆಯಾಗಬೇಕು.


ಕನ್ನಡ ಶಾಲೆಗಳು ಮುಚ್ಚದಂತೆ ತಡೆಯಲು ಹೋರಾಟಗಳು ಅಗತ್ಯವೇ?
ಕನ್ನಡ ಭಾಷೆ ಉಳಿವಿಗೆ ಹೋರಾಟದ ಜತೆಗೆ ಕನ್ನಡ ಕಟ್ಟುವ ಕೆಲಸಗಳು ಹೆಚ್ಚಾಗಿ ಆಗಬೇಕು. ಸಮ್ಮೇಳನಗಳಲ್ಲಿ ರಾಜಕೀಯ ಮತ್ತು ವೈಯಕ್ತಿಕ ಚರ್ಚೆಗಳಿಗಿಂತ ಕನ್ನಡ ಭಾಷೆ ಅಭಿವೃದ್ಧಿ, ಸಾಹಿತ್ಯಕ್ಕೆ ಪೋತ್ಸಾಹ ನೀಡುವ ಕಾರ್ಯಕ್ರಮಗಳು ಆಗಬೇಕು. ಕನ್ನಡ ಭಾಷೆ ಪ್ರಾಚಿನ ಭಾಷೆಯಾಗಿದ್ದು ಕನ್ನಡದ ಅಸ್ಮಿತೆ ಎತ್ತಿ ಹಿಡಿಯುವಂಥ ಕಾರ್ಯಕ್ರಮಗಳು ಅಗಬೇಕು.


ಮಹಿಳಾ ಸಾಹಿತ್ಯದ ಬಗ್ಗೆ?
ತೊಂದರೆಗೆ ಒಳಗಾದ, ಟನೆಗೆ ಬಾಧಿತರಾದ ಮಹಿಳೆ ಸ್ವಂತ ಅನುಭವದಿಂದ ಬರೆದ ಹಲವಾರು ಕೃತಿಗಳು ಶ್ರೇಷ್ಠ ಕೃತಿಗಳಾಗಿವೆ. ಮಹಿಳೆ ವಿಜ್ಞಾನ, ಪತ್ತೆದಾರಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದಾಗ ಅವರಿಗಾದ ಕಹಿ ಅನುಭವಗಳನ್ನು ಹೊರಚೆಲ್ಲಲು ಬರಹ ಅಮೂಲ್ಯವಾದ ಮಾರ್ಗವಾಗಿದೆ. ಇದರಿಂದ ಸಮಾಜದಲ್ಲಿ ಕೆಟ್ಟದ್ದನ್ನು ಸಾಹಿತ್ಯದ ಮೂಲಕ ತಡೆಯಬಹುದು ಎಂಬುದು ಸಾಬೀತಾಗಿದೆ.

ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಲು ಗಡಿ ಕನ್ನಡ ಭವನ ಅಭಿವೃದ್ಧಿಯಾಗದೆ ಇರುವುದರಿಂದ ತೊಂದರೆ ಉಂಟಾಗಿದೆ. ಜಿಲ್ಲಾ ಸಮ್ಮೇಳನ ಮಾಡಲಾಗುತ್ತಿದ್ದು. ಈಗ ದುರಸ್ತಿ ಸ್ಥಿತಿಯಲ್ಲಿರುವ ಡಿವಿಜಿ ರಂಗಮಂದಿರ ಅಭಿವೃದ್ಧಿ ಬಗ್ಗೆ ತಾಲೂಕು ಆಡಳಿತ ಮುಂದಾದರೂ ಕ್ರಮ ಕೈಗೊಳ್ಳಬೇಕು. ಶಂಕರ ಕೇಸರಿ ಕನ್ನಡ ಪರ ಸಂಟನೆಗಳ ಒಕ್ಕೂಟದ ಅಧ್ಯಕ್ಷ ಮುಳಬಾಗಿಲು

20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ವಿ ಮಾಡಲು ಕನ್ನಡದ ಕಟ್ಟಾಳುಗಳು ಶ್ರಮಿಸುತ್ತಿದ್ದಾರೆ. ಸಾಹಿತ್ಯ ಪರಿಷತ್​ನ ಪದಾಧಿಕಾರಿಗಳು ಜವಾಬ್ದಾರಿ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿದ್ದು ಮುಳಬಾಗಿಲಿನಲ್ಲಿ ಕನ್ನಡ ಸಾಹಿತ್ಯ ಕಂಪು ಹರಡುವಂತೆ ಮಾಡಲಾಗುವುದು. ಎನ್​.ಬಿ.ಗೋಪಾಲಗೌಡ, ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು ಕೋಲಾರ.