ಜಿಲ್ಲೆ

ಸಮ್ಮೇಳನ ಸಂಪನ್ನಗೊಳಿಸಲು ಕೈಜೋಡಿಸಿ

ಚಿತ್ರದುರ್ಗ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 13ನೇ ಸಮ್ಮೇಳನವನ್ನು ಕೋಟೆನಗರಿಯಲ್ಲಿ ಜ. 18, 19ರಂದು ಆಯೋಜಿಸಲಾಗಿದ್ದು, ಸಂಪನ್ನಗೊಳಿಸಲು ಎಲ್ಲರೂ ಕೈಜೋಡಿಸಿ ಎಂದು ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಎಂ.ವೀರೇಶ್ ಮನವಿ ಮಾಡಿದರು.

ಬಾಪೂಜಿ ಸಭಾಂಗಣದಲ್ಲಿ ಮಂಗಳವಾರ ನಡೆದ ನೌಕರರ ಸಭೆಯಲ್ಲಿ ಮಾತನಾಡಿ, ಮುರುಘಾಮಠ, ಎಸ್‌ಜೆಎಂ ವಿದ್ಯಾಸಂಸ್ಥೆ ಹಾಗೂ ಸಂಘ-ಸಂಸ್ಥೆಗಳ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಿ ಎಂದರು.

ಇದೇ ವೇಳೆ ಸ್ಮರಣ ಸಂಚಿಕೆ ಕುರಿತು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ವಿವರಿಸಿದರು. ಕೆಇಬಿ ಷಣ್ಮುಖಪ್ಪ, ಪಿ.ಯಶೋಧಮ್ಮ, ಬಿ.ಆರ್.ಮಹಂತೇಶ್, ಸಿದ್ದೇಶ್, ಎಂ.ಆರ್.ಜಯಲಕ್ಷ್ಮೀ, ನಾಗರಾಜ್ ಬೇಂದ್ರೆ, ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ, ಹುರುಳಿ ಎಂ. ಬಸವರಾಜ್ ಇತರರಿದ್ದರು.