ಆನವಟ್ಟಿ ಪಿಎಸಿಎಸ್ ವಾರ್ಷಿಕ ಸಭೆಯನ್ನು ಅಧ್ಯಕ್ಷ ರಾಜೇಂದ್ರ ನಾಯಕ್ ಉದ್ಘಾಟಿಸಿದರು. ಎ.ಪಿ.ಹರ್ಷ, ಈರಪ್ಪ, ಜಗದೀಶ್, ಕುಬೇರಪ್ಪ, ಕೃಷ್ಣಪ್ಪ, ನಾಗರಾಜ್, ಪ್ರಭುಗೌಡ, ಕೊಟ್ರೇಶಪ್ಪ ಇತರರಿದ್ದರು. 
ಜಿಲ್ಲೆ

ಸಮೃದ್ಧ ಜೀವನಕ್ಕೆ ಸಹಕಾರಿ ಸಂಘಗಳು ಪೂರಕ

ಸೊರಬ: ಸಹಕಾರ ಸಂಘಗಳ ನೆರವಿನಿಂದ ಇಂದು ರೈತರು ಕೃಷಿ ಜತೆಗೆ ಹೈನುಗಾರಿಕೆಯಲ್ಲಿ ಸಮೃದ್ಧ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಆನವಟ್ಟಿ ಪಿಎಸಿಎಸ್ ಅಧ್ಯಕ್ಷ ಟಿ.ಬಿ.ರಾಜೇಂದ್ರ ನಾಯಕ್ ಹೇಳಿದರು.

ತಾಲೂಕಿನ ಆನವಟ್ಟಿಯ ಬ್ರಾಹ್ಮಣ ಬೀದಿಯಲ್ಲಿರುವ ವೀರಶೈವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ರೈತರ ಜೀವನಾಡಿ. ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ. ರೈತರಿಗೆ ಹಣಕಾಸಿನ ನೆರವು, ರಸಗೊಬ್ಬರ, ಬಿತ್ತನೆ ಬೀಜ ವಿತರಣೆ ಹಾಗೂ ಕೃಷಿ ಸಂಬಂತ ಆರ್ಥಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿವೆ. ರೈತರ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ನಮ್ಮ ಸಂಘವು ಪ್ರಮುಖ ಪಾತ್ರ ವಹಿಸಿದೆ ಎಂದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಎ.ಪಿ.ಹರ್ಷ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷ ಈರಪ್ಪ, ನಿರ್ದೇಶಕರಾದ ಜಗದೀಶ್, ಕುಬೇರಪ್ಪ, ಕೃಷ್ಣಪ್ಪ, ನಾಗರಾಜ್, ಪ್ರಭುಗೌಡ, ಕೊಟ್ರೇಶಪ್ಪ, ಸುರೇಂದ್ರಗೌಡ, ಮರಬಸಪ್ಪ, ಪುಷ್ಪಾವತಿ, ಕ್ಷೇತ್ರಾಕಾರಿ ಕೃಷ್ಣಮೂರ್ತಿ, ಕಚೇರಿ ಸಹಾಯಕ ಕಿರಣಕುಮಾರ್ ಇದ್ದರು.