ಜಿಲ್ಲೆ

ಸಮುದ್ರದ ನಡುವೆ ಸಂಭ್ರಮದ ಕೂರ್ಮಗಡ ಜಾತ್ರೆ

ವಿಜಯವಾಣಿ ಸುದ್ದಿಜಾಲ ಕಾರವಾರ
ಅರಬ್ಬಿ ಸಮುದ್ರದ ನಡುವಿನ ಕೂರ್ಮಗಡ ದ್ವೀಪದ ಜಾತ್ರೆ ಶುಕ್ರವಾರ ಸಂಭ್ರಮದಿAದ ನಡೆಯಿತು. ಸಾವಿರಾರು ಭಕ್ತರು ದೋಣಿಯಲ್ಲಿ ತೆರಳಿ ದೇವರ ದರ್ಶನ ಪಡೆದರು.
ಕಡವಾಡದ ನರಸಿಂಹ ದೇವರನ್ನು ಶುಕ್ರವಾರ ಬೆಳಗ್ಗೆ ಸಿಂಗರಿಸಿದ ದೋಣಿಯಲ್ಲಿ ಕೂರ್ಮಗಡ ದ್ವೀಪಕ್ಕೆ ಕರೆತರಲಾಯಿತು. ಸಪ್ರೆ ಕುಟುಂಬದವರಿಂದ ಅಭಿಷೇಕ, ಮಹಾ ಪೂಜೆ, ಅಭಿಷೇಕ, ಮಂಗಳಾರತಿ ಕೈಗೊಂಡರು. ಬೈತಖೋಲ್ ನಿಂದ ಸಾವಿರಕ್ಕೂ ಅಧಿಕ ಭಕ್ತರು ದೋಣಿಯಲ್ಲಿ ತೆರಳಿ ಬಾಳೆ ಕೊನೆಯ ಹರಕೆ ಒಪ್ಪಿಸಿದರು. ತುಲಾಭಾರ ಸೇವೆ ಸಲ್ಲಿಸಿದರು. ಅಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಲಾಯಿತು. ರಾತ್ರಿ ಫಲಾವಳಿಗಳ ಲಿಲಾವು, ಭಜನೆ ಕಾರ್ಯಕ್ರಮಗಳು ನಡೆದವು. ಶನಿವಾರ ಬೆಳಗ್ಗೆ ದೇವರನ್ನು ವಾಪಸ್ ಕಡವಾಡಕ್ಕೆ ಕರೆದೊಯ್ಯಲಾಗುವುದು.
ಬಿಗಿ ಭದ್ರತೆ:
ವಿವಿಧ ಠಾಣೆಗಳ ನೂರಕ್ಕೂ ಅಽಕ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕಂದಾಯ ಅಽಕಾರಿಗಳು, ಅಗ್ನಿಶಾಮಕ, ಸಿಬ್ಬಂದಿ ಸಹಕರಿಸಿದರು. ಮಧ್ಯಾಹ್ನ 12 ರಿಂದ 1 ಗಂಟೆಯ ಸಮಯದಲ್ಲಿ ಜನಸಂದಣಿ ಹೆಚ್ಚಿತ್ತು. ಬೈತಖೋಲ್‌ನಲ್ಲಿ 200 ಮೀಗೂ ಹೆಚ್ಚು ಉದ್ದದ ಸರದಿಯಲ್ಲಿ ಜನ ನಿಂತು ದೋಣಿಗೆ ಹತ್ತಿದರು. ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ನೇತೃತ್ವದಲ್ಲಿ ಎಲ್ಲ ಮೀನುಗಾರರು ಜನರನ್ನು ಉಚಿತವಾಗಿ, ಸುರಕ್ಷಿತವಾಗಿ ದೋಣಿಯಲ್ಲಿ ಕರೆದೊಯ್ಯುವ ವ್ಯವಸ್ಥೆ ಮಾಡಿದರು.
ಜಟ್ಟಿ ಇಲ್ಲದೆ ಸಮಸ್ಯೆ
ಕೂರ್ಮಗಡದಲ್ಲಿ ದೋಣಿ ನಿಲುಗಡೆಗೆ ಜಟ್ಟಿ ಇಲ್ಲದ ಕಾರಣ ಭಕ್ತರು ಸಂಚಾರಕ್ಕೆ ತೊಂದರೆ ಉಂಟಾಯಿತು. ಬೈತಖೋಲ್‌ನಿಂದ ತೆರಳಿದ ಮೀನುಗಾರಿಕೆ ದೋಣಿಗಳು ಸುಮಾರು 100 ಮೀಟರ್ ಹೊರಗೇ ನಿಂತವು. ಅಲ್ಲಿಂದ ಭಕ್ತರನ್ನು ಡಿಂಗಿ( ಸಣ್ಣ ದೋಣಿ) ಯಲ್ಲಿ ದಡ ಸೇರಿಸಲು ಮೀನುಗಾರ ಯುವಕರು ಹರಸಾಹಸಪಟ್ಟರು. ಕೂರ್ಮಗಡ ಸಮೀಪ ತಲುಪಿದರೂ ಸಣ್ಣ ದೋಣಿಯಲ್ಲಿ ಜನ ದಡಕ್ಕೆ ಇಳಿಯಲು ಒಂದು ತಾಸು ಕಾಯಬೇಕಾಯಿತು. ಅಲ್ಲದೆ, ಅಪಾಯಕಾರಿ ಸ್ಥಿತಿಯಲ್ಲಿ ಭಕ್ತರು ದೋಣಿ ಹತ್ತಬೇಕಾಯಿತು. 2019 ರ ಜಾತ್ರೆಯ ಸಂದರ್ಭದಲ್ಲಿ ದೋಣಿ ಮಗುಚಿ ದುರಂತ ಸಂಭವಿಸಿದ ನಂತರ ಎಚ್ಚೆತ್ತ ಆಡಳಿತ ಕೂರ್ಮಗಡದಲ್ಲಿ ದೋಣಿ ನಿರ್ಮಿಸುವ ಭರವಸೆ ನೀಡಿತ್ತು. ಆದರೆ, ಅದು ಇದುವರೆಗೂ ಈಡೇರಿಲ್ಲ. ದೋಣಿಗಳಲ್ಲಿ ತೆರಳುವ ಭಕ್ತರಿಗೆ ಲೈಫ್ ಜಾಕೆಟ್ ವ್ಯವಸ್ಥೆಯನ್ನೂ ಮಾಡಿರಲಿಲ್ಲ.Ã…