ಚಿತ್ರದುರ್ಗ: ಸಮುದಾಯದ ಹಿತಾಸಕ್ತಿಗೆ ಧಕ್ಕೆಯಾದರೆ ಸುಮ್ಮನಿರಲು ಸಾಧ್ಯವಿಲ್ಲ,ಎಲ್ಲ ಸರ್ಕಾರಗಳು ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿವೆ ಎಂದು
ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಡಾ.ಪ್ರಸನ್ನಾನಂದ ಮಹಾ ಸ್ವಾಮೀಜಿ ಹೇಳಿದರು.
ಚಿತ್ರದುರ್ಗ ತಾಲೂಕು ಮಾಡನಾಯಕನಹಳ್ಳಿಯಲ್ಲಿ ಶನಿವಾರ ವಾಲ್ಮೀಕಿ ಯುವಕರ ಸಂಘ ಉದ್ಘಾಟಿಸಿ ಮಾತನಾಡಿದ ಶ್ರೀಗಳು,ಜಾತಿ ಜನ ಸಂ ಖ್ಯೆಗೆ ಅನುಗುಣವಾಗಿ ಎಲ್ಲರಿಗೂ ಮೀಸಲಾತಿ ಕೊಡಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮುಂದುವರಿದ ಸಮುದಾಯ ಕೇಳದಿದ್ದರೂ ಶೇ.10 ಮೀಸಲಾತಿ ಕೊಟ್ಟಿದ್ದಾರೆ. ಆದರೆ ನಾವುಗಳು ಹೋರಾಟ ನಡೆಸಿದ್ದ ಫಲವಾಗಿ ರಾಜ್ಯಸರ್ಕಾರ ಶೇ.3 ಮೀಸಲು ಪ್ರಮಾಣವನ್ನು 4ಕ್ಕೆ ಹೆಚ್ಚಿಸಲಾಗಿದೆ.
ಶೈಕ್ಷಣಿಕ,ಸಾಮಾಜಿಕ,ಆರ್ಥಿಕ,ರಾಜಕೀಯ,ಔದ್ಯೋಗಿಕವಾಗಿ ಮುಂದೆ ಬರಲು ಎಲ್ಲ ಸಮುದಾಯಗಳು ಸಂಘಟಿತವಾಗುತ್ತಿವೆ. ರಾಜ್ಯದಲ್ಲಿ 50-60 ಲಕ್ಷದಷ್ಟು ನಾಯಕ ಸಮುದಾಯದವರಿದ್ದು,ಮೀಸಲಾತಿ ಹೆಚ್ಚಿಸಿಕೊಳ್ಳಲು 31 ವರ್ಷಗಳ ಕಾಲ ಹೋರಾಡ ಬೇಕಾಯಿತು ಹಾಗೂ ಅನೇ ಕ ಹಿರಿಯರ ಹೋರಾಟದಿಂದಾಗಿ ಪರಿಶಿಷ್ಟ ವರ್ಗಕ್ಕೆ ಸೇರಿದೆ.
2006ರಲ್ಲಿ ಕುಲದೀಪ್‌ಸಿಂಗ್ ಆಯೋಗದಂತೆ ರಾಜಕೀಯ ಪ್ರಾತಿನಿಧ್ಯವೂ ದೊರೆತಿದೆ. ಯುವಕರು ನಾಯಕ ಸಮಾಜಕ್ಕೆ ಆಗುವ ಅನ್ಯಾಯ ದ ವಿರುದ್ಧ ಹೋರಾಡ ಬೇಕು.
ಎಲ್ಲ ಜಾತಿಯ ಬಡವರು,ಶೈಕ್ಷಣಿಕವಾಗಿ ಹಿಂದುಳಿದವರ ಪರ ನಿಲ್ಲಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು.ವಾಲ್ಮೀಕಿ ಜಯಂತಿ ದಿನದಂದು ಮಾಂಸಾಹಾರ ಸೇವಿಸಬಾರದು. ಪ್ರತಿ ತಿಂಗಳು ಹುಣ್ಣಿಮೆ ದಿನದಂದು ವಾಲ್ಮೀಕಿ ಭವನದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವ ಚಿತ್ರ ಪೂಜಿಸಬೇಕು. ಚುನಾವಣೆ ವೇಳೆ ರಾಜಕೀಯ ಪಕ್ಷಗಳ ಜತೆ ಗುರುತಿಸಿಕೊಳ್ಳುವುದು ತಪ್ಪಲ್ಲ. ಸಂಘಟನೆ ಪ್ರಶ್ನೆ ಬಂದಾಗ ಎಲ್ಲರೂ ಒಗ್ಗಟ್ಟಾ ಗಿರಬೇಕೆಂದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಮಾತನಾಡಿ,ಸಂಘದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ. ಹಳ್ಳಿಗಳಲ್ಲಿ ಸಾಮರಸ್ಯ ಮೂ ಡಿಸುವ ಕೆಲಸ ಮಾಡಿ. ಸಂಘ ಎಂದರೆ ಪಕ್ಷಾತೀತವಾಗಿರಬೇಕು. ರಾಜಕೀಯ ದ್ವೇಷ ನುಸುಳಿದರೆ ಸಂಘಟನೆಯಲ್ಲಿ ಒಡಕು ಮೂಡುತ್ತದೆ. ಶ್ರೀ ಗಳ ಮುಂದಾಳತ್ವದಲ್ಲಿ ಬೆಂಗಳೂರಲ್ಲಿ ಹೋರಾಟ ನಡೆಸಿದ್ದರಿಂದಾಗಿ ಮೀಸಲು ಪ್ರಮಾಣದಲ್ಲಿ ಹೆಚ್ಚಳವಾಯಿತು. ರಾಜನಹಳ್ಳಿಯಲ್ಲಿ ಮಠ ನಿರ್ಮಾಣವಾಗಲು ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಕೊಡುಗೆ ಬಹಳಷ್ಟಿದೆ ಎಂದರು.
ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ ಮಾತನಾಡಿ,ನಾನು ಚಿತ್ರದುರ್ಗ ನಗರಸಭೆ ಅಧ್ಯಕ್ಷನಾಗಿದ್ದಾಗ ನಗರದಲ್ಲಿ ಮದ ಕರಿನಾಯಕರ ಪ್ರತಿಮೆ ನಿರ್ಮಾಣವಾಯಿತು. ಸಮಾಜದ ಅಭಿವೃದ್ಧಿಗೆ ಸಂಘದ ಪದಾಧಿಕಾರಿಗಳು ಕೆಲಸ ಮಾಡಬೇಕೆಂದರು.
ಜಿಲ್ಲಾ ವಾಲ್ಮೀಕಿ ಕೋ-ಆಪರೇಟಿವ್ ಸೊಸೈಟಿಯ ಎ.ತಿಪ್ಪೇಸ್ವಾಮಿ,ಯುವ ಮುಖಂಡ ಕೆ.ಟಿ.ಕುಮಾರಸ್ವಾಮಿ,ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಬಿ.ದೇವೇಂದ್ರಪ್ಪ ಮಾತನಾಡಿದರು. ನಾಯಕ ಸಮಾಜದ ಮುಖಂಡರಾದ ಬಿ.ಮಂಜುನಾಥ್,ಜಿಪಂ ಮಾಜಿ ಸದಸ್ಯ ಲೋಹಿತಾಶ್ವ, ಎನ್.ಆರ್.ಬೈಯಣ್ಣ,ಕಲ್ಕುಂಟೆ ರಾಜೇಶ್,ಮಾಡನಾಯಕನಹಳ್ಳಿ ಗ್ರಾಪಂ ಅಧ್ಯಕ್ಷ ಎಸ್.ಪಿ.ರಾಜೇಶ್,ಉಪಾಧ್ಯಕ್ಷೆ ಸರಸ್ವತಿ ರಾಜಶೇಖರ್, ಸದ ಸ್ಯರಾದ ಎಸ್.ಟಿ.ಲಿಂಗರಾಜ್,ರಾಜೇಶ್ವರಿನಾಗರಾಜ್,ಲಿಂಗರಾಜ್,ಗೌರಮ್ಮ ಮೈಲಾರಪ್ಪ,ಪಿಡಿಒ ಲಲಿತಾಕುಮಾರಿ ಹಾಗೂ ಸಂಘದ ಪದಾ ಧಿಕಾರಿಗಳು ಇದ್ದರು.