ಚಿಟಗುಪ್ಪ: ಸಮುದಾಯ ಭವನಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಅದರ ಸದ್ಬಳಕೆಗೆ ಮುಂದಾಗಬೇಕು. ಉತ್ತಮ ನಿರ್ವಹಣೆ ಸಹ ಅತ್ಯಂತ ಅವಶ್ಯಕವಾಗಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಮನ್ನಾಎಖೇಳ್ಳಿ ಗ್ರಾಮದಲ್ಲಿರುವ ಹನುಮಾನ ದೇವಸ್ಥಾನದ ಬಳಿ ಸುಮಾರು ೧೫ ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮಸ್ಥರು ಕಟ್ಟಡ ನಿರ್ಮಾಣ ಕಾಮಗಾರಿ ಮುಂದೆ ನಿಂತು ಗುಣಮಟ್ಟದ ಸಮುದಾಯ ಭವನಕ್ಕೆ ಸಹರಿಸಬೇಕು ಎಂದರು.
ಗ್ರಾಮಾಂತರ ಪ್ರದೇಶದ ಜನರ ಮದುವೆ ಸಮಾರಂಭಗಳಿಗೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಇಂತಹ ಸಮುದಾಯ ಭವನಗಳು ಅತ್ಯಾವಶ್ಯಕ. ಸರ್ಕಾರ ಪ್ರತಿಯೊಂದು ಸಮುದಾಯದವರಿಗೂ ಭವನಗಳ ನಿರ್ಮಾಣಕ್ಕೆ ಅನುದಾನ ನೀಡುತ್ತಿದೆ. ಈ ಸಮುದಾಯ ಭವನವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇನ್ನು ಕೆಲವು ಗ್ರಾಮಗಳಲ್ಲಿನ ಭವನಗಳು ನಿರ್ಮಾಣ ಹಂತದಲ್ಲಿದ್ದು, ಕೆಲವು ಪ್ರಾರಂಭದ ಹಂತದಲ್ಲಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಗ್ರಾಮಸ್ಥರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನ ಹರಿಸಬೇಕು. ಇಂದಿನ ಮಕ್ಕಳು ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಮುಖಂಡರಾದ ಸುರೇಶ ಮಾಶೆಟ್ಟಿ, ಸದಾನಂದ ಜೋಶಿ, ಸಂತೋಷಿ ನಿಡವಂಚಾ, ಸಂತೋಷ ಹಳ್ಳಿಖೇಡ, ಬಕ್ಕಪ್ಪ ಬಸರೆಡ್ಡಿ, ನಾರಾಯಣ ರೆಡ್ಡಿ, ರಾಜಕುಮಾರ ಪಾಂಚಾಳ, ಹನುಮಂತ, ಈಶ್ವರ ಬಸರೆಡ್ಡಿ, ವೀರಶೆಟ್ಟಿ ಮಡಿವಾಳ, ಜಗನ್ನಾಥ ಆರ್ಯಾ, ದತ್ತು ರಾಸೂರ, ಭೀಮರೆಡ್ಡಿ ವರವಟ್ಟಿ, ರಾಜು ಮಹಾರಾಜ, ಶಿವಕುಮಾರ, ಆಬೇದ್ ಅಲಿ, ಮೋಹನ, ತಾಜೋದಿನ್, ಬಸವರಾಜ, ರಮೇಶ, ನಾಗಯ್ಯ ಸ್ವಾಮಿ ಇತರರಿದ್ದರು.