ಮಡಿಕೇರಿ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ ಅವರ ಪ್ರಯತ್ನ ಫಲವಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಸಮುದಾಯಗಳ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಒಟ್ಟು ಎರಡು ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ.
ಶ್ರೀ ನಾರಾಯಣ ಗುರು ಸಮುದಾಯ ಭವನದ ಕಾಮಗಾರಿಗೆ ಒಂದು ಕೋಟಿ ರೂ, ಹಾಕತ್ತೂರು ತೊಂಬತ್ತು ಮನೆ ಸಮುದಾಯ ಭವನ ಮುಂದುವರಿದ ಕಾಮಗಾರಿಗೆ ಐದು ಲಕ್ಷ ರೂ. ನಾಪೋಕ್ಲು ಇಂದಿರಾ ನಗರದಲ್ಲಿ ಸಮುದಾಯ ಭವನ ಕಾಮಗಾರಿಗೆ ಹತ್ತು ಲಕ್ಷ ರೂ, ಚೆನ್ನಯ್ಯನ ಕೋಟೆ ಸಮುದಾಯ ಭವನಕ್ಕೆ ಐದು ಲಕ್ಷ ರೂ., ಕೆದಮಳ್ಳೂರು ದವಸ ಭಂಡಾರ ಪಕ್ಕ ಸಮುದಾಯ ಭವನ ಕಾಮಗಾರಿಗೆ ೧೫ ಲಕ್ಷ ರೂ ನೀಡಲಾಗುತ್ತದೆ.
ಗೋಣಿಕೊಪ್ಪದಲ್ಲಿ ಸ್ವಾತಂತ್ರ್ಯ ಸಮುದಾಯ ಭವನ ಕಾಮಗಾರಿಗೆ ಮೂವತ್ತು ಲಕ್ಷ ರೂ, ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ಕೊಡವ ಸಮಾಜ ಸಮುದಾಯ ಭವನ ಕಾಮಗಾರಿಗೆ ೨೫ ಲಕ್ಷ ರೂ, ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಶ್ರೀ ಬಸವೇಶ್ವರ ಸಮುದಾಯ ಭವನ ಕಾಮಗಾರಿಗೆ ಹತ್ತು ಲಕ್ಷ ರೂಗಳು ಸೇರಿದಂತೆ ವಿರಾಜಪೇಟೆ ಕ್ಷೇತ್ರದ್ಯಾದಂತ ಒಟ್ಟು ಎಂಟು ಆಯ್ದ ಕಾಮಗಾರಿಗೆ ಎರಡು ಕೋಟಿ ಅನುದಾನ ಬಿಡುಗಡೆಯಾಗಿದ್ದು ಮುಂದಿನ ವಾರ ಕಾಮಗಾರಿಗೆ ಚಾಲನೆ ದೊರೆಯಲಿದೆ ಶಾಸಕರಾದ ಎ.ಎಸ್.ಪೊನ್ನಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.