ಜಿಲ್ಲೆ

ಸಮುದಾಯ ಭವನ ನಿರ್ಮಿಸಲು ಆಗ್ರಹ

ಕಮಲನಗರ: ಸೋನಾಳ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ನೆಲಸಮಗೊಳಿಸಿದ್ದು, ಪುನಃ ನಿರ್ಮಿಸಲು ಆಗ್ರಹಿಸಿ ಶುಕ್ರವಾರ ಭೀಮ್ ಆರ್ಮಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಸೋನಾಳದ ದಲಿತರ ಬಡಾವಣೆಯಲ್ಲಿ ೫೦ ವರ್ಷದ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲಾಗಿದೆ. ಸಮುದಾಯ ಭವನದ ಕಟ್ಟಡದಲ್ಲಿ ಮದುವೆ, ಧಾರ್ಮಿಕ, ಸಾಮಾಜಿಕ ಸಮಾರಂಭ ನಡೆಸಲಾಗುತ್ತಿತ್ತು. ಆದರೆ ಭವನ ಹಳೆಯದಾಗಿದೆ ಎಂದು ನೆಲಸಮಗೊಳಿಸಲಾಗಿದೆ. ಇದರಿಂದ ಕಾರ್ಯಕ್ರಗಳನ್ನು ಮಾಡಲು ತೊಂದರೆ ಆಗುತ್ತಿದ್ದು, ತಕ್ಷಣ ನೂತನ ಸಮುದಾಯ ಭವನ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಸಿದ್ದಾರ್ಥ, ಕವಿತಾಬಾಯಿ ಕಾಂಬಳೆ, ಗ್ರಾಪಂ ಸದಸ್ಯೆ ಸುಲಾಬಾಯಿ ಗೋವಿಂದ, ಉಷಾಬಾಯಿ ತುಕಾರಾಮ, ಕವಿತಾ ದೇವಿದಾಸ, ಕವಿತಾ ಸಿಂಧೆ, ತುಕಾರಾಮ ಕಾಂಬಳೆ, ಸುರೇಶ ಕಾಂಬಳೆ, ಗೌತಮ ಬಗದಲ್‌ಕರ್ ಇತರರಿದ್ದರು.