ಜಿಲ್ಲೆ

ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ

ಕನಕಪುರ: ತಾಲೂಕಿನ ಸಾತನೂರು ಹೋಬಳಿ ಅಚ್ಚಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಮಾರನಹಳ್ಳಿ ಗ್ರಾಮದ ಕಾಲಭೈರವೇಶ್ವರ ದೇವಸ್ಥಾನದ ಬಳಿ ಸಂಸದ ಡಾ.ಸಿ.ಎನ್.ಮಂಜುನಾಥ್ ಹಾಗೂ ಸಿ.ಎಸ್.ಆರ್ ಅನುದಾನದ 50 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಲಾಯಿತು.

ಮರಳೇಗವಿ ಮಠದ ಡಾ.ಶ್ರೀಮುಮ್ಮಡಿ ಶಿವರುದ್ರ ಸ್ವಾಮೀಜಿ ಹಾಗೂ ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರನಾಥ ಸ್ವಾಮೀಜಿಗಳು ಪೂಜೆ ನೆರವೇರಿಸಿ ಮಾತನಾಡಿ, ಶ್ರೀಗಳು ಸಂಸದರು ಶ್ರದ್ಧೆಯಿಂಧ ಸಮುದಾಯ ಭವನಕ್ಕೆ ಅನುದಾನ ನೀಡಿದ್ದಾರೆ. ಅದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲ ಪಕ್ಷದ ಮುಖಂಡರು ಪ್ರೀತಿ, ವಿಶ್ವಾಸ, ಅಭಿಮಾನದಿಂದ ಸೇರಿ ಒಗ್ಗಟ್ಟಿನಿಂದ ಸಮುದಾಯ ಭವನವನ್ನು ನಿರ್ಮಾಣ ಮಾಡಬೇಕು ಎಂದರು.

ಸದಸ್ಯ ಜಯರಾಮು, ಮಾಜಿ ಸದಸ್ಯ ಶಿವಪ್ಪ, ಅಂದಾನಿಗೌಡ, ಅನಂತು, ಸಿದ್ದಪ್ಪಾಜಿ, ಅನುಕುಮಾರ್, ಮಾರಪ್ಪ, ಶಿವರಾಜು ಹಾಜರಿದ್ದರು.