ಜಿಲ್ಲೆ

ಸಮುದಾಯ ಆಸ್ಪತ್ರೆ ಸ್ಥಳ ಪರಿಶೀಲಿಸಿದ ಸಚಿವ

ರಾಜಣ್ಣ

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಆಸ್ಪತ್ರೆಯ ಸ್ಥಳವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಪರಿಶೀಲಿಸಿದರು.

ನಂತರ ಸಚಿವರು ಹಾಗೂ ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಶಾಸಕರು ಸಚಿವರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಿ, ಆಸ್ಪತ್ರೆಯ ಶೀಘ್ರ ಕಾಮಗಾರಿಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.

ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಸತೀಶ್, ತಾಲೂಕು ಆರೋಗ್ಯ ಅಧಿಕಾರಿಗಳಾದ ಯತಿರಾಜ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ತಹಸೀಲ್ದಾರ್ ಮೋಹನ್, ಕಂದಾಯ ಅಧಿಕಾರಿ ಸುಧೀಂದ್ರ, ಡಿಸಿಸಿ ಸದಸ್ಯರು ಮುಕಟ್ಟೀರ ಸಂದೀಪ್, ತಾಲೂಕು ಬಗರ್ ಹುಕುಂ ಅಧ್ಯಕ್ಷ ಲಾಲಾ ಅಪ್ಪಣ್ಣ, ಹಿರಿಯರಾದ ಮೂಕಳೇರ ಕುಶಾಲಪ್ಪ, ಜಿಮಿ ಅಣ್ಣಯ್ಯ, ಎರ್ಮು ಹಾಜಿ, ಚೆಕ್ಕೇರ ವಾಸು ಕುಟ್ಟಪ್ಪ, ಸುಧೀರ್, ಪೆಮ್ಮಂಡ ಪೊನ್ನಪ್ಪ, ಅಜ್ಜಿಕುಟ್ಟಿರ ಗಿರೀಶ್, ಪ್ರಶಾಂತ್, ದಿಲ್ಲು, ಹುದಿಕೇರಿ ವಲಯ ಅಧ್ಯಕ್ಷರು ಸೂರಜ್, ಭವಿನ್ ಕುಶಾಲಪ್ಪ, ಸುಕು ಬೋಪಣ್ಣ, ಅಲೀರ ರಶೀದ್, ಪೆರುಮಲೆ ಗಣೇಶ್, ಹ್ಯಾರೀಶ್, ಸೂರಜ್ ಹೊಸೂರು, ಕುಂಡಚೀರ ಮಂಜು ದೇವಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಕ್ಷಿತ್ ಚಂಗಪ್ಪ, ಶಬೀರ್, ವ್ಯದ್ಯರು, ಸಿಬ್ಬಂದಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.