????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಸಮೀಕ್ಷೆಯಲ್ಲಿ ವನ್ನಿಯಕುಲ ಕ್ಷತ್ರಿಯ ಎಂದಷ್ಟೇ ನಮೂದಿಸಿ

ಹನೂರು: ಸರ್ಕಾರ ಕೈಗೊಂಡಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮುದಾಯದ ಪ್ರತಿಯೊಬ್ಬರೂ ವನ್ನಿಯಕುಲ ಕ್ಷತ್ರಿಯ ಎಂದೇ ನಮೂದಿಸಬೇಕು ಎಂದು ವನ್ನಿಯಕುಲ ಕ್ಷತ್ರಿಯರ ಸಂಘದ ಪುದು ರಾಮಾಪುರ ಗ್ರಾಮ ಘಟಕದ ಅಧ್ಯಕ್ಷ ಶ್ರೀರಂಗ ಗೌಂಡರ್ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದರು. ವನ್ನಿಯಕುಲ ಕ್ಷತ್ರಿಯ ಪ್ರಧಾನ ಜಾತಿಯಲ್ಲಿ ಪಡಿಯಾಚಿ, ಪಡಿಯಾಚಿ ಗೌಂಡರ್, ಸೇರಿದಂತೆ 24 ಉಪ ಜಾತಿಗಳಿವೆ. ಸರ್ಕಾರ ಜಾತಿ ಹಾಗೂ ಸಿಂಧುತ್ವ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ. ಇದರಿಂದ ಸಮುದಾಯದ ಜನರು ತೊಂದರೆ ಅನುಭವಿಸುವಂತಾಗಿದೆ. ಜಾತಿ ಪ್ರಮಾಣ ಪತ್ರ, ಸಿಂಧುತ್ವ ಪ್ರಮಾಣ ಪತ್ರ ಹಾಗೂ ಸರ್ಕಾರದ ಸೌಕರ್ಯವನ್ನು ದೊರಕಿಸಿ ಕೊಡುವ ಸಂಬಂಧ ಹಿಂದುಳಿದ ವರ್ಗಗಳ ಆಯೋಗ ಹಾಗೂ ಕಾಂತರಾಜು ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಮನವಿಯನ್ನು ಸ್ವೀಕರಿಸಿದ ಆಯೋಗ ವಾಸ್ತವ ಸ್ಥಿತಿ ಅಧ್ಯಯನ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಅನುಮೋದನೆಗಾಗಿ ಕಾಯಲಾಗುತ್ತಿದೆ. ಸಮೀಕ್ಷೆಯಲ್ಲಿ ಕ್ರಮ ಸಂಖ್ಯೆ ಎ-1513ರಲ್ಲಿರುವ ವನ್ನಿಯ ಕುಲ ಕ್ಷತ್ರಿಯ ಎಂದು ನಮೂದಿಸಬೇಕು. ಮುಂದಿನ ದಿನಗಳಲ್ಲಿ ಪ್ರಮಾಣ ಪತ್ರ, ಮೀಸಲಾತಿ ಹಾಗೂ ಸರ್ಕಾರದ ಸೌಲಭ್ಯವನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಸೋಮಸುಂದರ್, ಮುಖಂಡರಾದ ವೆಂಕಟೇಶ್, ಚೋಳ ಗೌಂಡರ್, ಕಂದಸ್ವಾಮಿ ಗೌಂಡರ್, ವೆಂಕಟರಾಮನ್, ಪಳನಿಸ್ವಾಮಿ, ವೀರಪ್ಪಗೌಂಡರ್, ಲಕ್ಷ್ಮಣ, ವೇಲುಸ್ವಾಮಿ ಇದ್ದರು.