ಜಿಲ್ಲೆ

ಸಮೀಕ್ಷೆಯಲ್ಲಿ ಬ್ರಾಹ್ಮಣ ಎಂದಷ್ಟೇ ಬರೆಸಿ

ಯಳಂದೂರು: ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಜಾತಿ ಜನಗಣತಿಯ ಜಾತಿ ಕಾಲಂನಲ್ಲಿ ಬ್ರಾಹ್ಮಣ ಎಂದು ನಮೂದಿಸುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಶಿವಕುಮಾರ್ ತಿಳಿಸಿದ್ದಾರೆ.

ಪಟ್ಟಣದ ಶಂಕರ ಸಭಾ ಭವನದಲ್ಲಿ ಸೋಮವಾರ ನಡೆದ ಬ್ರಾಹ್ಮಣ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಯಳಂದೂರು, ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ, ಹನೂರು ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಬ್ರಾಹ್ಮಣ ಸಮುದಾಯದವರು ಇದ್ದಾರೆ. ಗಣತಿ ಕಾರ್ಯದಲ್ಲಿ ಧರ್ಮದ ಕಾಲಂನಲ್ಲಿ ಹಿಂದು ಹಾಗೂ ಜಾತಿ ಕಾಲಂನಲ್ಲಿ ಬ್ರಾಹ್ಮಣ ಎಂದು ನಮೂದಿಸಬೇಕೆಂದು ತಿಳಿಸಲಾಗಿದೆ. ಉಪ ಪಂಗಡದಲ್ಲಿ ಕಾಲಂನಲ್ಲಿ ನಮೂದಿಸಬಾರದು ಎಂದು ಹೇಳಿದರು.

ನಾಗರಾಜು, ನಾಗಶೈನ್, ಚಂದ್ರಮೌಳಿ, ಕೆ.ಎಸ್.ಮುರಳಿ, ನವನೀತ, ಕೆ.ವಿ.ವೆಂಕಟೇಶ್, ಶ್ರೀನಾಥ್ ಹಾಜರಿದ್ದರು.