ಜಿಲ್ಲೆ

ಸಮೀಕ್ಷೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ಒತ್ತಾಯ

ಬಾಗಲಕೋಟೆ : ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಯ ಜನಗಣತಿ ಮಾಡಲಾಗುತ್ತಿದ್ದು ಸಮೀಕ್ಷೆಗೆ ಹೆಚ್ಚಿನ ಸಿಬ್ಬಂದಿ‌ ನಿಯೋಜಿಸಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ‌ ರಾಜ್ಯ‌ ಉಪಾಧ್ಯಕ್ಷ ವೈ.ಸಿ.ಕಾಂಬಳೆ ಸರ್ಕಾರವನ್ನು ಒತ್ತಾಯಿಸಿದರು.

ನವನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ‌ ಅವರು, ಎಸ್ಸಿ ಕಾಲೋನಿಗಳಿದ್ದಲ್ಲಿ‌ ಗಣತಿಗೆ ಸಿಬ್ಬಂದಿ ಹೆಚ್ಚಿಗೆ ನೀಡಲು ಸರ್ಕಾರ‌‌‌ ಆಧ್ಯತೆ ನೀಡಬೇಕು ಎಂದರು.

ಸಮೀಕ್ಷೆಯ ಸಂದರ್ಭದಲ್ಲಿ ಸುಳ್ಳು‌ಹೇಳಿ‌ ಕೆಲವರು ಎಸ್ಸಿ ಎಂದು ನಮೂದು ಮಾಡುತ್ತಿದ್ದು ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು.‌ಸಮೀಕ್ಷೆ ದಿನಾಂಕ‌ ಹೆಚ್ಚಿಸಬೇಕು ಎಂದರು

ಸಮೀಕ್ಷೆಯ ಸಂದರ್ಭದಲ್ಲಿ ಪದೇ ಪದೇ ಸರ್ವರ ಕೈ ಕೊಡುತ್ತಿದ್ದು ಇದರ ಬಗ್ಗೆ ಸರ್ಕಾರ‌ ಒತ್ತು ಕೊಡಬೇಕು.‌ಹೆಚ್ಚಿನ ಮುತವರ್ಜಿ ವಹಿಸಿ ಸರಿಪಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಸಂವಿಧಾನದ ಅನ್ವಯ ಸೌಲಭ್ಯ ಪಡೆದುಕೊಳ್ಳಲು ಮೀಸಲಾತಿ ಅವಶ್ಯವಿದ್ದು, ಸಮೀಕ್ಷೆಗೆ ಅಧಿಕಾರಿಗಳು‌‌ ಬಂದಾಗ ಜಾತಿಯ ಬಗ್ಗೆ ಸರಿಯಾಗಿ ಮಾಹಿತಿ ನೀಡಬೇಕು‌ ಎಂದರು.

ಗುರುಶಾಂತಪ್ಪ‌ಮದಿನಕರ,ಮಂಜುನಾಥ ನಡುವಿನಮನಿ,ಅಶೋಕ ರಾಜಾಪುರ, ಶಂಕರ ಚಂದಾವರಿ,ನಾಗೇಶ ಚಂದಾವರಿ  ದ್ದರು.