ಬಾಗಲಕೋಟೆ: ಮನುಷ್ಯನ ವೈಚಾರಿಕ ಪ್ರಜ್ಞೆಗೆ ಎಡ ಬಲವೆಂಬ ಗುದ್ದಾಟವಿದೆ ವಿನಃ ಮನುಷ್ಯತ್ವಕ್ಕೆ ಮಾತ್ರ ಸಮಾನತೆಯ ಕರುಣೆಯ ತತ್ವವಿರುತ್ತದೆ. ಮನುಷ್ಯತ್ವ ಬಿಟ್ಟರೇ ಯಾವ ವೈಚಾರಿಕೆ ಪ್ರಜ್ಞೆಗಳು ಉಳಿಯಲಾರವು ಎಂದು ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.
ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಶಿವಶರಣ ಮಾದಾರ ಚೆನ್ನಯ್ಯ ಸೇವಾ ಸಮಿತಿ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರೊ.ಎಚ್.ಲಿಂಗಪ್ಪ ಚಿತ್ರದುರ್ಗ ರಚಿಸಿರುವ ಆದಿಮರ ಚರಿತ್ರೆ ಮತ್ತು ಎಂಟು ದಲಿತ ಶರಣರ-ಶರಣೆ ವಚನಕಾರರ ಕೃಗಳ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಉಳಿದೆಲ್ಲ ಸಮುದಾಯಗಳಂತೆ ನಮ್ಮ ಇರುವಿಕೆ ಮತ್ತು ಅಸ್ತಿತ್ವವನ್ನು ಸಾಬಿತು ಪಡಿಸುವುದರಿಂದ ನಮ್ಮ ಜನರ ಸ್ವಾಭಿಮಾನವು ಹೆಚ್ಚುತ್ತದೆ. ಸಮಾಜ ಹಾಗೂ ಸರ್ಕಾರಗಳ ಸೌಲಭ್ಯ ಹಾಗೂ ಗೌರವ ಪಡೆಯಲು ಒಂದು ಅಸ್ತಿತ್ವ ಹೊಂದಿದAತಾಗುತ್ತದೆ. ಅಂಥ ಅಸ್ತಿತ್ವದ ಪ್ರಶ್ನೆಗಳಿಗೆ ಉತ್ತರ ನೀಡಲೆಂದು ಇಂತಹ ಸಂಶೋಧನಾತ್ಮಕ ಹಾಗೂ ವಿಮರ್ಶಾತ್ಮಕ ಕೃತಿಗಳು ಕಾಲ ಕಾಲಕ್ಕೆ ಹೊರಗೆ ಬರಬೇಕು. ಸಮುದಾಯದಲ್ಲಿ ಪ್ರಜ್ಞೆಯೂ ಹೆಚ್ಚುತ್ತದೆ ಎಂದರು.
ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ಶರಣ ಪರಂಪರೆಯಯಲ್ಲಿ ಶೋಷಿತ ವರ್ಗಗಳನ್ನು ಕೂಡಿಸಿಕೊಂಡು ಸರ್ವರಿಗೂ ಸಮಾನತೆ ತಂದವರು ಬಸವಣ್ಣನವರು, ಅಂದು ನಡೆ ನುಡಿ ಒಂದಾಗಿತ್ತು, ಇಂದು ನಡೆ ನುಡಿಗೆ ಬಾರಿ ಅಂತರವಿದೆ. ಶರಣ ಶರಣೆಯರ ಆದಿಮರ ಕುರಿತು ರಚಿಸಿರುವ ಮೌಲಿಕ ಗ್ರಂಥ ಸಮುದಾಯಕ್ಕೆ ಉಪಯುಕ್ತವಾಗಿವೆ. ಇಂದು ಸಮ ಸಮಾಜದ ನಿರ್ಮಾಣದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಚಾಲುಕ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಿತ್ರದುರ್ಗದ ಲೇಖಕರು ಹಾಗೂ ಶರಣ ಸಾಹಿತಿ ಪ್ರೊ.ಎಚ್.ಲಿಂಗಪ್ಪ ಮಾತನಾಡಿ, ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂಸ್ಕೃತಿ ನಮ್ಮದು. ನಮ್ಮ ಸಮಾಜ ಉತ್ತಮ ಪರಂಪರೆ ಹೊಂದಿದೆ. ಆದರೆ ಶೋಷಣೆ ಅನ್ಯಾಯಕ್ಕೆ ಒಳಗಾದಂತ ಈ ಸಮಾಜದಲ್ಲಿ ಹುಟ್ಟಿರುವಂತ ಮಹಾನ ದಾರ್ಶನಿಕರು ಸಾಕಷ್ಟು ಕೊಡುಗೆ ಭಾರತದ ಸಾಹಿತ್ಯಕ್ಕೆ ಕೊಟ್ಟಿದ್ದಾರೆ. ೧೨ನೇ ಶತಮಾನದಲ್ಲಿ ಬಸವಣ್ಣ ಆ ಕಾಲದಲ್ಲಿದ್ದ ಜಾತಿ ಸೂತಕವನ್ನು ಬಹಳ ಚೆನ್ನಾಗಿ ನಿರ್ವಹಿಸಿದ್ದರು, ಬಸವ ಚಳುವಳಿ ನಮ್ಮೆಲ್ಲರ ಚಳುವಳಿ, ಶರಣರ ಚಳುವಳಿಯಾಗಿತ್ತು ಎಂದು ತಿಳಿಸಿದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಶರಣರ ಆದರ್ಶಗಳನ್ನು ಅನುಸರಿಸಿದಲ್ಲಿ ಸಮಸ್ಯೆಗಳಿರುವುದಿಲ್ಲ. ಆ ನಿಟ್ಟಿನಲ್ಲಿ ಸಮಕಾಲಿನ ಸಮಸ್ಯೆಗಳನ್ನು ಅರಿತು ಮಾತನಾಡುವಂತವರು, ಬರೆಯುವಂತಹ, ಚಿಂತಕರು ಶೋಷಿತ ಸಮುದಾಯದಿಂದ ಬೆಳೆಯಬೇಕಿದೆ, ಅಂಥವರ ಸಾಲಿನಲ್ಲಿ ಪ್ರೊ.ಎಚ್.ಲಿಂಗಪ್ಪನವರು ಸಮುದಾಯಕ್ಕೆ ತಮ್ಮದೆಯಾದ ಕೊಡುಗೆ ನಿಡಿದ್ದು ಶ್ಲಾಘನೀಯವಾಗಿದೆ ಎಂದರು.
ಸಮಿತಿ ಸಂಚಾಲಕ ಮುತ್ತಣ್ಣ ಬೆಣ್ಣೂರ ಮಾತನಾಡಿದರು. ಇತಿಹಾಸ ಸಂಶೋಧಕ ಡಾ. ಎನ್.ಎಸ್.ಮಹಂತೇಶ ಆದಿಮರ ಚರತ್ರೆ ಕುರಿತು ಹಾಗೂ ಹಿರಿಯ ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರು ದಲಿತ ವಚನಕಾರರು ಪುಸ್ತಕ ಕುರಿತು ಮತ್ತು ಎಂ.ಜಿ.ರAಗಸ್ವಾಮಿ ಅವರು ಕಲ್ಯಾಣ ಕಾಲದ ಶರಣೆಯರ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಮಾಜಿ ಸದಸ್ಯ ಶಿವಾನಂದ ಟವಳಿ, ಡಾ.ಚನ್ನವಿರೇಗೌಡ, ಎಂ.ಯು.ಮೂಗನೂರ, ಯಲ್ಲಪ್ಪ ಬೆಂಡಿಗೇರಿ, ಸಂತೋಷ ಸವಣೂರ, ಯಲ್ಲಪ್ಪ ನಾರಾಯಣಿ, ಎಚ್.ವಿ.ಲಿಂಗಣ್ಣವರ್, ಲಕ್ಷ÷್ಮಣ ಯಂಕAಚಿ, ಪರುಶುರಾಮ ಬಸವ್ವಗೋಳ, ಶ್ಯಾಮರಾವ ಘಾಟಗೆ, ಸಚಿನ ಕೊಡತೆ, ಸುನಿಲ ಕಂಬೋಗಿ, ಕಾಂತಚAದ್ರ ಜ್ಯೋತಿ, ಶಿವಾನಂದ ಬಿಸನಾಳ, ಹನಮಂತ ಚಿಮ್ಮಲಗಿ ಇತರರು ಇದ್ದರು.