ಶಹಾಪುರದಲ್ಲಿ ಹಮ್ಮಿಕೊಂಡ ಬಸವ ಬೆಳಕು ಕಾರ್ಯಕ್ರಮದಲ್ಲಿ ಭಾಲ್ಕಿ ಹಿರೇಮಠದ ಮಹಾಲಿಂಗ ಸ್ವಾಮೀಜಿ, ಸಿದ್ಧರಾಮ ಯಳವಂತಗಿ, ಸಿದ್ಧಲಿಂಗಪ್ಪ ಆನೇಗುಂದಿ, ಶೋಭಾ ಆನೇಗುಂದಿ, ಶರಣಮ್ಮ ಆನೇಗುಂದಿ ,ಅಯ್ಯಣ್ಣ ನಂದಿ, ವಿಶ್ವಾರಾಧ್ಯ ಸತ್ಯಂಪೇಟೆ ಇತರರಿದ್ದರು. 
ಜಿಲ್ಲೆ

ಸಮಾನತೆ ಅನುಭವ ಕಟ್ಟಿದವರು ಬಸವಣ್ಣ

ಹರೀಶ ಕುಲಕರ್ಣಿ

ಶಹಾಪುರ: ಬಸವಣ್ಣನವರೆ ಇಷ್ಟಲಿಂಗ ಜನಕ ಎಂಬುದು ಈಗ ನಿರ್ವಿವಾದ ಸಂಗತಿ. ವೈದಿಕ ವ್ಯವಸ್ಥೆ ರೂಪಿಸಿದ್ದ ಎಲ್ಲ ಕಟ್ಟು ಪಾಡುಗಳನ್ನು ಗಾಳಿಗೆ ತೂರಿ ಸಮಾನತೆ ಅನುಭವ ಮಂಟಪ ಕಟ್ಟಿದವರೇ ವಿಶ್ವಗುರು ಬಸವಣ್ಣನವರು ಎಂದು ಕಲಬುರಗಿ ಬಸವ ತತ್ವ ಪ್ರಸಾರಕ ಸಿದ್ಧರಾಮ ಯಳವಂತಗಿ ಹೇಳಿದರು.

ಸ್ಥಳೀಯ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಹಮ್ಮಿಕೊಂಡ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಇಷ್ಟಲಿಂಗ ಅರಿವಿನ ಕುರುಹು. ಆಚಾರದ ಪ್ರತೀಕ. ಇಷ್ಟಲಿಂಗವನ್ನು ಧರಿಸುವುದೆಂದರೆ ಭಾವೈಕ್ಯತೆಯನ್ನು ಮೆರೆಯುವುದು ಎಂದರ್ಥ. ಶರಣರು ಬರುವ ಪೂರ್ವದಲ್ಲಿ ದೇವರುಗಳನ್ನು ಹೊರಗಡೆ ಹುಡುಕಾಡುತ್ತಿದ್ದರು. ಕಲ್ಲು ಮಣ್ಣು ಪಂಚಭೂತಗಳೆಲ್ಲವೂ ದೇವರಾಗಿದ್ದವು. ಬಸವಣ್ಣನವರು ಇಷ್ಟಲಿಂಗ ಕರುಣಿಸಿದ ಮೇಲೆ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಅಂತಃರAಗ ಹಾಗೂ ಬಹಿರಂಗ ಪರಿಶುದ್ಧಿಗೆ ಸಾಧ್ಯವಾಯಹಿತು ಎಂದರು.

ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠದ ಮಹಾಲಿಂಗ ಸ್ವಾಮೀಜಿ, ಬಸವಾದಿ ಶರಣರು ಮೆಟ್ಟಿದ ಧರೆಯನ್ನು ಸ್ಪರ್ಶಿಸುವುದೆ ಪಾವನ. ಮನುಷ್ಯತ್ವದೆಡೆಗೆ ತುಡಿವ ಜನಗಳೆಲ್ಲ ಬಸವಣ್ಣನವರ ಕಾರ್ಯಕ್ಷೇತ್ರ ಬಸವ ಕಲ್ಯಾಣಕ್ಕೆ ಭೇಟಿ ನೀಡಲೆಬೇಕು ಎಂದರು.

ಸಿದ್ಧಲಿAಗಪ್ಪ ಆನೇಗುಂದಿ ಅಧ್ಯಕ್ಷತೆ ವಹಿಸಿದ್ದರು. ಶೋಭಾ ಬಸವರಾಜ ಆನೇಗುಂದಿ, ಶರಣಮ್ಮ ಸಿದ್ಧಾರೂಢ ಆನೇಗುಂದಿ, ಬಸವ ತತ್ವಾಭಿಮಾನಿ ಅಯ್ಯಣ್ಣ ನಂದಿ, ಶಿವಯೋಗಪ್ಪ ಮುಡಬೂಳ, ಷಣ್ಮುಖ ಅಣಬಿ, ಹೊನ್ನರೆಡ್ಡಿ ವಕೀಲರು, ಶಂಭುಲಿAಗ ದೇಸಾಯಿ, ತಿಪ್ಪಣ್ಣ ಜಮಾದಾರ, ಕಮಲಮ್ಮ ಸತ್ಯಂಪೇಟೆ, ತಿಪ್ಪಣ್ಣ ಜಮಾದಾರ, ಅಡಿವೆಪ್ಪ ಜಾಕಾ, ಬಸವರಾಜ ಅರುಣಿ, ಲಕ್ಷö್ಮಣ ಲಾಳಸೇರಿ, ಕವಿತಾ ಗುಡಗುಂಟಿ, ಜ್ಯೋತಿ ವಾಗಾ, ಕವಿತಾ ಗುಡಗುಂಟಿ, ಪಂಪಣ್ಣಗೌಡ ಮಳಗ, ಮಲ್ಲು ಗುಡಿ, ಶಂಕ್ರಪ್ಪ ಪೋಸ್ಟ ಮಾಸ್ಟರ್, ಕಾಮಣ್ಣ, ಹಣಮಂತ ಕೊಂಗAಡಿ, ವಿಶ್ವನಾಥ ಬುಂಕಲದೊಡ್ಡಿ, ಸಿದ್ದು ಕೇರವಂಟಿಗಿ,ಭೀಮನಗೌಡ,ಬಸವರಾಜ ಹುಣಸಗಿ,ಭೀಮಣ್ಣ ಪಾಡಮುಖಿ, ರಾಜು ಕುಂಬಾರ, ಶಿವರುದ್ರ ಉಳ್ಳಿ, ಗುಂಡಪ್ಪ ಕೋರಿ, ಉಮೇಶ ಗೋಗಿ ಮೊದಲಾದವರು ಭಾಗವಹಿಸಿದ್ದರು. ಸೂಗಮ್ಮ ಹಿರೇಮಠ ವಚನ ಪ್ರಾರ್ಥನೆ ಮಾಡಿದರು.

ಈ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಣ್ಣ ಆರಬೋಳ, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ. ಸಿದ್ಧರಾಮ ಹೊನ್ಕಲ್, ಮೀನಾಕ್ಷಿ ಆರ್. ಹೊಸ್ಮನಿ, ಮತ್ತು ಸಂಗೀತಾ ದೇಸಾಯಿ ಅವರನ್ನು ಸನ್ಮಾನಿಸಲಾಯಿತು.