ತರೀಕೆರೆ ಪ್ರಧಾನ ಅಂಚೆ ಕಚೇರಿ ಎದುರು ನೌಕರರು ಪ್ರತಿಭಟನೆ ನಡೆಸಿದರು. ಟಿ.ಹನುಮಂತಪ್ಪ, ವೈ.ಯು.ಗಂಗಾಧರ, ಶಿವಶಂಕರ್ ಇತರರಿದ್ದರು. 
ಜಿಲ್ಲೆ

ಸಮಾನ ವೇತನ ನೀಡಿ

ಎಸ್.ಎನ್.ರವೀಂದ್ರ

ತರೀಕೆರೆ: ವಿವಿಧ ಬೇಡಿಕೆಗೆ ಒತ್ತಾಯಿಸಿ ಭಾರತೀಯ ಅಂಚೆ ಇಲಾಖೆ ನೌಕರರು ಬುಧವಾರ ಪಟ್ಟಣದ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟಿಸಿದರು.

ಜಿಲ್ಲಾ ಗ್ರಾಮೀಣ ಅಂಚೆ ನೌಕರರ ಸಂಘದ ಕಾರ್ಯದರ್ಶಿ ಟಿ.ಹನುಮಂತಪ್ಪ ಮಾತನಾಡಿ, 3 ಲಕ್ಷಕ್ಕೂ ಅಧಿಕ ಗ್ರಾಮೀಣ ಅಂಚೆ ನೌಕರರಿಗೆ ಸರ್ಕಾರ ಸೂಕ್ತ ಸಂಬಳ, ಸಾರಿಗೆ ವ್ಯವಸ್ಥೆ, ಮುಂಬಡ್ತಿ ನೀಡಿಲ್ಲ. ನಿವೃತ್ತಿ ವೇತನ ನೀಡುತ್ತಿಲ್ಲ. ನಿವೃತ್ತ ನ್ಯಾಯಮೂರ್ತಿ ಕಮಲೇಶ ಚಂದ್ರ ಸಮಿತಿ ವರದಿಯನ್ನು ಜಾರಿಗೆ ತಂದಿಲ್ಲ ಎಂದು ದೂರಿದರು. 8ನೇ ವೇತನ ಸಮಿತಿಗೂ ಈ ನೌಕರರನ್ನು ಒಳಪಡಿಸದೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಎಲ್ಲ ಗ್ರಾಮೀಣ ಅಂಚೆ ನೌಕರರಿಗೆ ದಕ್ಕಬೇಕಾದ ಸೌಲಭ್ಯ ಕೊಡಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಗ್ರಾಮೀಣ ಅಂಚೆ ನೌಕರರ ಸಂಘದ ಉಪಾಧ್ಯಕ್ಷ ವೈ.ಯು.ಗಂಗಾಧರ, ಪ್ರಮುಖರಾದ ಶಿವಶಂಕರ್, ಎಸ್.ಕೆಂಪಯ್ಯ, ಎಂ.ಪಂಚಾಕ್ಷರಿ, ಎನ್.ರವಿ, ಎನ್.ಎಸ್.ಪರಮೇಶ್ವರಪ್ಪ ಮತ್ತಿತರರಿದ್ದರು.