ದಾವಣಗೆರೆ: ಅವೈಜ್ಞಾನಿಕ ಜಾತಿಗಣತಿ ವರದಿ ಕೈಬಿಡಬೇಕು. ಈ ವಿಚಾರ ಸಂಬಂಧ ಸಮಾನ ಪೀಠಾಧ್ಯಕ್ಷರ ಜತೆ ಚರ್ಚಿಸಿ ಮುಖ್ಯಮಂತ್ರಿ ಭೇಟಿ ಕುರಿತು ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ದಾವಣಗೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ವರದಿ ಅವೈಜ್ಞಾನಿಕ, ನಾಲ್ಕು ಗೋಡೆಗಳ ಮಧ್ಯೆ ಕುಳಿತು ವರದಿ ತಯಾರಾಗಿದೆ ಎಂವುದಾಗಿ ವಿರೋಧ ವ್ಯಕ್ತವಾಗಿದೆ. ಕುಲಶಾಸ್ತ್ರೀಯ ಅಧ್ಯಯನ ಮೂಲಕ ಗಣತಿ ಮಾಡಬೇಕಿತ್ತು. ಅದನ್ನು ಅನುಸರಿಸಲಾಗಿಲ್ಲ. ಪರ-ವಿರೋಧ ಹಿನ್ನಲೆಯಲ್ಲಿ ಸಂಘರ್ಷಕ್ಕೆ ಕಾರಣವಾಗಬಾರದು. ಶಾಸಕರು ಸಲ್ಲಿಸಿದ ಮನವಿಯಂತೆ ಸರ್ಕಾರ ವರದಿ ಸ್ವೀಕರಿಸಬಾರದು ಎಂದು ಆಗ್ರಹಿಸಿದರು.
------------------