ಜಿಲ್ಲೆ

ಸಮಾನ ಅಭಿರುಚಿಯೊಂದಿಗೆ ಸಾಹಿತ್ಯ-ಇತಿಹಾಸದ ಅಧ್ಯಯನವಾಗಲಿ

ಚಿತ್ರದುರ್ಗ: ಐತಿಹಾಸಿಕ ಜಿಲ್ಲೆ ಚಿತ್ರದುರ್ಗವೂ ಸಂಶೋಧನೆ ತಾಣವಾಗಿದೆ ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ.ಎಸ್.ವೈ.ಸೋಮಶೇಖರ್ ಹೇಳಿದರು.
ನಗರದ ಡಿಡಿಪಿಐ ಕಚೇರಿ ಎಸ್‌ಎಸ್‌ಕೆ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಶಿಕ್ಷಣ ಇಲಾಖೆ ಜಿಲ್ಲಾ ಉಪಯೋಜನಾ ಸಮನ್ವಯಾಧಿ ಕಾರಿ ಸಿ.ಎಂ.ತಿಪ್ಪೇಸ್ವಾಮಿ ಅವರ ರಕ್ಕಸದಂಗಡಿ ಕದನ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು,ರಕ್ಕಸದಂಗಡಿಯ ಯುದ್ಧ ನಿರ್ಣಾ ಯಕ.
333 ವರ್ಷಗಳ ಕಾಲ ವಿಜಯನಗರದಲ್ಲಿ ಅರಸರು ಆಳ್ವಿಕೆ ನಡೆಸಿದ್ದಾರೆ. 92 ಪುಟಗಳ ಈ ಕೃತಿಯಲ್ಲಿ ವೈವಿಧ್ಯಮಯ ಆಕರಗಳಿವೆ. ಇ ವುಗಳನ್ನು ಒಂದೆಡೆ ಪ್ರಯತ್ನವನ್ನು ತಿಪ್ಪೇಸ್ವಾಮಿ ಮಾಡಿದ್ದಾರೆ. ಹಂಪಿ ವಿವಿ ಸಂಶೋಧಕರಿಗೆ ಚಿತ್ರದುರ್ಗದ ಸಂಶೋಧಕರು ಸ್ಪರ್ಧೆ ನೀಡುತ್ತಿ ದ್ದಾರೆ. ನಮ್ಮಲ್ಲಿ ಅತಿ ಹೆಚ್ಚು ಪಿಎಚ್‌ಡಿ ಪಡೆದವರು ಚಿತ್ರದುರ್ಗ ಜಿಲ್ಲೆಯವರೆಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದರು.
ಕೃತಿ ಬಿಡುಗಡೆ ಮಾಡಿದ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರು ಮಾತನಾಡಿ,ಕ್ಷೇತ್ರ ಕಾರ‌್ಯದಿಂದ ಕೃತಿಗೆ ಶಕ್ತಿ ತುಂಬ ಲು ಲೇಖಕನಿಗೆ ಸಾಧ್ಯವಾಗಲಿದೆ. ಇತಿಹಾಸ ಸಂಶೋಧನೆಗೆ ದೃಢತೆ ತಂದುಕೊಡುತ್ತದೆ. ಪೌರಾಣಿಕ ಕಥನದೊಂದಿಗೆ ಇತಿಹಾಸವನ್ನು ಹೇ ಳಿದರೆ ಜನರು ಕೂತುಹಲದಿಂದ ಕೇಳುತ್ತಾರೆ. ಸಾಹಿತ್ಯ,ಇತಿಹಾಸವನ್ನು ಸಮಾನ ಅಭಿರುಚಿಯಲ್ಲಿ ಅಧ್ಯಯನ ಮಾಡಬೇಕು.ಇತಿಹಾಸ, ಸಾಹಿತ್ಯ ಪರಸ್ಪರ ಪೂರಕ ಎಂದರು.
ಇತಿಹಾಸ ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಗೋಪಾಲಕೃಷ್ಣರಾವ್ ಮಾತನಾಡಿ ತಾಳಿಕೋಟೆ ಯುದ್ಧ ಘನಘೋರವಾಗಿತ್ತು ಎಂ ಬುದನ್ನು ತಿಪ್ಪೇಸ್ವಾಮಿ ಉತ್ತಮವಾಗಿ ಚಿತ್ರಿಸಿದ್ದಾರೆಂದರು. ಲೇಖಕ ಸಿ.ಎಂ.ತಿಪ್ಪೇಸ್ವಾಮಿ ಮಾತನಾಡಿ,ಅನೇಕರ ಸಂಶೋಧನೆಗಳನ್ನು ಓದಿ ಕೃತಿಗೆ ಹೊರ ರೂಪ ಕೊಟ್ಟಿದ್ದೇನೆ ಎಂದರು. ವಿನಾಯಕ ಡಿಜಿಟಲ್‌ನ ಕಾರ್ತಿಕ್ ಇದ್ದರು. ಶಿಕ್ಷಕ ಕೆ.ಕರಿಬಸಪ್ಪ ಪ್ರಾರ್ಥಿಸಿದರು. ನಿವೃತ್ತ ಬಿ ಇಒ ತಿಪ್ಪೇಸ್ವಾಮಿ ಸ್ವಾಗತಿಸಿದರು. ಶಿಕ್ಷಕ ಟಿ.ಪಿ.ಉಮೇಶ್ ನಿರೂಪಿಸಿದರು.
(ಸಿಟಿಡಿ 19 ಕೃತಿಬಿಡುಗಡೆ)
ಚಿತ್ರದುರ್ಗದಲ್ಲಿ ಶನಿವಾರ ಲೇಖಕ ಸಿ.ಎಂ.ತಿಪ್ಪೇಸ್ವಾಮಿ ಅವರ ರಕ್ಕಸದಂಗಡಿಕೃತಿಯನ್ನು ಬಿಡುಗಡೆ ಮಾಡಲಾಯಿತು.ಡಾ.ಎಸ್. ವೈ.ಸೋಮಶೇಖರ್,ಡಾ.ಬಿ.ರಾಜಶೇಖರಪ್ಪ,ಡಾ.ಕೆ.ಜಿ.ಗೋಪಾಲಕೃಷ್ಣರಾವ್,ತಿಪ್ಪೇಸ್ವಾಮಿ ಇತರರು ಇದ್ದರು.